ದಿನಾಂಕ: 30/08/2024 ರಂದು ಮಧ್ಯಾಹ್ನ 3:30 ಗಂಟೆಯಿಂದ ಸಾಯಂಕಾಲ 5:00 ಗಂಟೆಯ ಮಧ್ಯೆ ಯಾರೋ ಕಳ್ಳರು ಕಾರ್ಕಳ ತಾಲೂಕು, ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯಲ್ಲಿರುವ ವಾಸ್ತವ್ಯದ ಮನೆಯ ಬೀಗವನ್ನು ಮನೆಯ ಹೊರಗಡೆ ಡಬ್ಬಿಯಲ್ಲಿ ಇರಿಸಿದ್ದ ಕೀ ಯನ್ನು ಬಳಸಿ, ತೆರೆದು, ಮನೆಯ ಒಳಗಡೆ ಪ್ರವೇಶಿಸಿ ಮನೆಯ ಬೆಡ್ ರೂಮ್‌ನಲ್ಲಿದ್ದ ಗೋದ್ರೇಜ್ ಲಾಕರ್ ನ್ನು ಅಲ್ಲೇ ಇರಿಸಿದ್ದ ಕೀ ಸಹಾಯದಿಂದ ತೆರೆದು ಲಾಕರ್ ನಲ್ಲಿರಿಸಿದ್ದ ಚಿನ್ನಾಭರಣಗಳ ಪೈಕಿ ಸುಮಾರು 33 ಪವನ್ ತೂಕದ 10,05,000/- ಅಂದಾಜು ಮೌಲ್ಯ ದ ವಿವಿಧ ರೀತಿಯ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಸಲ್ಲಿಸಿದ್ದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆ ಯಲ್ಲಿ ಠಾಣಾ ಅ.ಕ್ರ 97/2024 ಕಲಂ 331(3), 305 ಬಿ.ಎಸ್.ಎಸ್ ನಂತೆ ಪ್ರಕರಣ ದಾಖಲಾಗಿರುತ್ತದೆ
. ಪ್ರಕರಣದ ತನಿಖೆಯ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್‌ಐ ದಿಲೀಪ್ ಜಿ.ಆರ್ ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ತನಿಖಾ ವಿಭಾಗದ ಪಿ.ಎಸ್.ಐ ಸುಂದರ ಹಾಗೂ ಸಿಬ್ಬಂದಿಯವರಾದ ಮಹಾಂತೇಶ್, ಪ್ರಶಾಂತ್ ಕೆ, ವಿಶ್ವನಾಥ, ಶಶಿಕುಮಾರ್, ನಾಗರಾಜ, ಗೋವಿಂದ ಆಚಾರಿ ರಾಘವೇಂದ್ರ, ಅಶೋಕ ರವರು ವಿಶೇಷ ತಂಡವನ್ನು ರಚಿಸಿದ್ದು,
ಇವರುಗಳು ಆರೋಪಿ ಸಂತೋಷ್.ಟಿ(32), ತಂದೆ: ತಂಗಚ್ಚನ್, ಮಾಳ ಗ್ರಾಮ, ಕಾರ್ಕಳ ತಾಲೂಕು ಎಂಬಾತನನ್ನು ದಿನಾಂಕ 01/09/2024 ರಂದು ವಶಕ್ಕೆ ಪಡೆದು, ಆಪಾದಿತನಿಂದ ಕಳವು ಮಾಡಿದ 33 ಪವನ್ ತೂಕದ 10,05,000/- ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿ ಕೊಳ್ಳಲಾಗಿರುತ್ತದೆ.