ಉಡುಪಿ- 'ನಮ್ಮ ಶಾಲೆ ನಮ್ಮ ಹೆಮ್ಮೆ' ಶೀರ್ಷಿಕೆಯಡಿ ದೊಡ್ಡಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆಯಾದ ಬೆನ್ನಲ್ಲೇ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಂಘದ ಜೊತೆ ಕಾರ್ಯದರ್ಶಿ ಹಾಗೂ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಆಗಿರುವ ನಿರ್ಮಲಾ ಸುರೇಂದ್ರ ಶಾಲೆಯ ಆವರಣದಲ್ಲಿ ದೀಪ ಬೆಳಗಿಸಿ, ಸದಸ್ಯತ್ವ ಪುಸ್ತಕವನ್ನ ಅನಾವರಣ ಮಾಡುವ ಮೂಲಕ ಸಂಘದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪರೀಕ್ಷಿತ್ ಶೇಟ್, ಉಪಾಧ್ಯಕ್ಷೆ ಕೀರ್ತಿ ಕಾಂಚನ್, ಗೌರವಾಧ್ಯಕ್ಷ ರೋಹಿತ್ ಕರಂಬಳ್ಳಿ, ಕಾರ್ಯದರ್ಶಿ ಸೌಮ್ಯ ಭಟ್, ಸಂಘಟನಾ ಕಾರ್ಯದರ್ಶಿ ನಾಗೇಶ್, ಕ್ರೀಡಾ ಕಾರ್ಯದರ್ಶಿ ರಫೀಕ್ ಕರಂಬಳ್ಳಿ, ಎಸ್ ಡಿಎಂಸಿ ಅಧ್ಯಕ್ಷೆ ಜಾಹಿದಾ ಉಪಸ್ಥಿತರಿದ್ದರು.