ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಂಗಳೂರು ಮಂಡಲ ವ್ಯವಸ್ಥೆಯ ಅಧೀನದಲ್ಲಿರುವ ಉಡುಪಿ 'ಹವ್ಯಕ ವಲಯೋತ್ಸವ'ವು ಹವ್ಯಕಸಭಾ ಉಡುಪಿ ಸಂಸ್ಥೆಯ ಸಹಭಾಗಿತ್ವದಲ್ಲಿ ಇತ್ತೀಚೆಗೆ ಉಡಪಿಯ ಪೆರಂಪಳ್ಳಿ ಹವ್ಯಕಧಾಮದಲ್ಲಿ ನೆರವೇರಿತು.
ಇದರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಮಂಡಲದ ಉಪಾಧ್ಯಕ್ಷ ಶ್ರೀ ರಾಜಶೇಖರ ಭಟ್ ಕಾಕುಂಜೆಯವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಒತ್ತಡದ ನಡುವೆಯೂ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಕೊಂಡಾಡಿದರು.
ಮಂಗಳೂರು ಮಂಡಲದ ಸಹಾಯ ಪ್ರಧಾನ ಶ್ರೀ ಭಾಸ್ಕರ ಹೊಸಮನೆಯವರು ಮಾತನಾಡಿ ಹವ್ಯಕರ ಸಂಘಟನೆಯನ್ನು ಬಲಪಡಿಸಲು ಎಲ್ಲ ಪ್ರಧಾನರು, ಗುರಿಕಾರರು, ಶ್ರೀಕಾರ್ಯಕರ್ತರು ಜವಾಬ್ದಾರಿಯುತವಾಗಿ ಕೆಲಸಮಾಡುವಂತೆ ಕೋರಿದರು.
ವಲಯಾಧ್ಯಕ್ಷ ಶ್ರೀ ಗುಣವಂತೇಶ್ವರ ಭಟ್ಟರು ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿ ಅಲ್ಪ ಸಮಯಾವಕಾಶದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಲಯೋತ್ಸವವನ್ನು ಸಮರ್ಥವಾಗಿ ಆಚರಿಸಿದ ಬಗ್ಗೆ ಎಲ್ಲರನ್ನು ಅಭಿನಂದಿಸಿದರು.
ವಲಯದ ಉಪಾಧ್ಯಕ್ಷ ಬಾಲಚಂದ್ರ ಕರಣಿಕ್ ಹಾಗೂ ಸಭಾದ ಆಂತರಿಕ ಲೆಕ್ಕಪರಿಶೋಧಕ ಪ್ರೊ:ಸದಾಶಿವ ರಾವ್ ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಎನ್.ರಾಮ ಭಟ್ ಪ್ರಸ್ತಾವನೆಗೈದರು. ಸಹಾಯ ಪ್ರಧಾನ ಡಾ:ವೆಂಕಟಾಚಲ ಎಚ್. ಸ್ವಾಗತಿಸಿ, ಹವ್ಯಕಸಭಾದ ಕಾರ್ಯದರ್ಶಿ ಡಾ:ಸುಬ್ರಾಯಕೃಷ್ಣ ಭಟ್ ವಂದಿಸಿದರು. ಗಿರೀಶ್ ಕೆ.ಎನ್. ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾಪ್ರಧಾನ ಡಾ:ಮುರಳೀಶ್ವರ್ ಹಾಗೂ ಯುವಪ್ರಧಾನ ಪೃಥ್ವೀಶ್ ಭಟ್, ಯುವತಿ ಪ್ರಧಾನೆ ಚಿನ್ಮಯಿ ವಿಜಯ್ ಅವರ ಸಂಯೋಜನೆಯಲ್ಲಿ ಪೂರ್ವಾಹ್ನ ವಿವಿಧ ರೀತಿಯ ಸ್ಪರ್ಧೆಗಳು ಏರ್ಪಟ್ಟವು. ಸ್ಪರ್ಧಾ ವಿಜೇತರಿಗೆ ಶ್ಯಾಂಪ್ರಸಾದ್ ಭಟ್ ಪೇತ್ರಿ ಇವರ ಅನ್ನಪೂರ್ಣ ನರ್ಸರಿ ವತಿಯಿಂದ ಪರಿಸರಸ್ನೇಹೀ ಪ್ರಶಸ್ತಿಯಾಗಿ ಗಿಡಗಳನ್ನು ನೀಡಲಾಯಿತು. ತೀರ್ಪುಗಾರರಾಗಿ ಡಾ:ಜಯಶಂಕರ ಕಂಗಣ್ಣಾರು, ಎಚ್.ಗಣಪಯ್ಯ, ಉಮಾಶಂಕರಿ, ಆಶಾ ತಿಮ್ಮಪ್ಪ, ತಿಮ್ಮಪ್ಪಯ್ಯ ಸಹಕರಿಸಿದ್ದರು.