Header Ads Widget

ತಿರುಪತಿ ಲಡ್ಡು ವಿವಾದ: ಆಂಧ್ರ ಮಾಜಿ ಸಿಎಂ ಜಗನ್ ಮನೆ ಬಳಿ ಉದ್ವಿಗ್ನತೆ

 

ಅಮರಾವತಿ: ವೈಸಿಪಿ ಸರ್ಕಾರದ ಅವಧಿಯಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಯ ಲಡ್ಡು ಪ್ರಸಾದ ತಯಾರಿಕೆಗೆ ಬಳಸುತ್ತಿದ್ದ ತುಪ್ಪದಲ್ಲಿ ಕಲಬೆರಕೆ ಯಾಗಿರುವುದು ದೃಢಪಟ್ಟಿರುವುದರಿಂದ ಮಾಜಿ ಸಿಎಂ ಹಾಗೂ ವೈಸಿಪಿ ನಾಯಕ ಜಗನ್ ಮೋಹನ್ ರೆಡ್ಡಿ ವಿರುದ್ಧ ತೀವ್ರ ಟೀಕೆ ವ್ಯಕ್ತ ವಾಗುತ್ತಿದೆ.

ಸೆ.22(ಭಾನುವಾರ)ಶ್ರೀವೆಂಕಟೇಶ್ವರ ಸ್ವಾಮಿ ಯ ಭಕ್ತರು ಹಾಗೂ ಹಿಂದೂ ಧಾರ್ಮಿಕ ಸಂಘಟನೆಗಳು ಜಗನ್​ ನಿವಾಸದ ಎದುರು ಆಕ್ರೋಶ ವ್ಯಕ್ತಪಡಿಸಿದರು. ಸಹಸ್ರಾರು ಮಂದಿ ಭಕ್ತರು ಸೇರಿದ್ದರಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.


ತಾಡೆಪಲ್ಲಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಜಗನ್ ನಿವಾಸದ ಎದುರು ಧಿಕ್ಕಾರದ ಘೋಷ ಣೆಗಳನ್ನು ಕೂಗಿದ ಭಕ್ತರು ಜಗನ್​ ಹಿಂದೂ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಜಗನ್ ಮನೆಯ ಗೇಟ್‌ನಲ್ಲಿ ಜಮಾ ಯಿಸಿದರು. ಪೊಲೀಸರು ತಡೆಯಲು ಮುಂದಾ ದಾಗ ಪರಿಸ್ಥಿತಿ ಉದ್ವಿಗ್ನಕ್ಕೆ ಕಾರಣ ವಾಯಿತು.


ಈ ವೇಳೆ ಪೊಲೀಸರು ಹಾಗೂ ಯುವ ಮೋರ್ಚಾ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಮುಖ್ಯದ್ವಾರದಲ್ಲಿ ಹಾಕಿದ್ದ ಬ್ಯಾರಿಕೇಡ್​ಗಳನ್ನು ದಾಟಿದ ಭಕ್ತರು ವೈಸಿಪಿ ಕಚೇರಿ ಮುಂಭಾಗಕ್ಕೆ ತೆರಳಿ ಗೋಡೆ ಗಳಿಗೆ ಕೆಂಪು ಬಣ್ಣ ಎರಚಲಾಯಿತು. 

ಬಳಿಕ ಜಗನ್ ಮನೆಗೆ ನುಗ್ಗಲು ಯತ್ನಿಸಿದರು. ಬೃಹತ್ ಗೇಟ್ ಮುಚ್ಚಿದ್ದರಿಂದ ಗೇಟಿನ ಮೇಲೂ ಕೆಂಪು ಬಣ್ಣ ಸುರಿಯಲಾಯಿತು.


ಜಗನ್ ಹಿಂದೂ ದ್ರೋಹಿ ಎಂದು ಮನೆ ಎದುರು ಘೋಷಣೆ ಕೂಗಿದರು. ಇದಾದ ನಂತರ ಈ ಹಿಂದೆ ಕ್ಯಾಂಪ್ ಆಫೀಸ್ ಇದ್ದ ಕಡೆಯಿಂದ ಪ್ರವೇಶಿಸಲು ಯತ್ನಿಸಿದರು. 

ಅದು ಸಾಧ್ಯವಾಗದಿದ್ದಾಗ ವೈಸಿಪಿ ಕಚೇರಿ ಮತ್ತು ಜಗನ್ ಮನೆ ಗೇಟ್ ಮುಂದೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.