Header Ads Widget

ಜೆಸಿಐ ದೊಡ್ಣಗುಡ್ಡೆ ಘಟಕ: ಆರ್ಥಿಕ ಸಹಾಯ

 

ಜೆಸಿಐ ದೊಡ್ಣಗುಡ್ಡೆ ಪ್ರಕೃತಿ ಘಟಕವು ಸಾರ್ವ ಜನಿಕ ಗಣೇಶೋತ್ಸವ ಸಮಿತಿ ದೊಡ್ಣಗುಡ್ಡೆ ಇವರ ಸಹಕಾರದೊಂದಿಗೆ ಜೆಸಿ ಸಪ್ತಾಹ 2024 ರ ಕಾರ್ಯಕ್ರಮ ಜನತಾ ವ್ಯಾಯಾಮಶಾಲೆ ದೊಡ್ಡಣ್ಣಗುಡ್ಡೆ ಯಲ್ಲಿ ನೆರವೇರಿಸಿತು. 

ಜೆಸಿ ಸಪ್ತಾಹದಡಿಯಲ್ಲಿ , ಜೆಸಿಐ ಘಟಕದ ಸಾಮಾಜಿಕ ಸೇವೆಯ ಸದುದ್ದೇಶದಿಂದ ಬಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ಮತ್ತು ದೊಡ್ಣಗುಡ್ಡೆ ಸರಕಾರಿ ಶಾಲೆಯ ಅಭಿವೃದ್ಧಿಗೆ.

ತಲಾ ಹತ್ತು ಸಾವಿರದಂತೆ ಆರ್ಥಿಕ ಸಹಾಯ ನೀಡಲಾಯಿತು. ,ಘಟಕದ ಅಧ್ಯಕ್ಷರಾದ ಜೆಸಿ ಹರ್ಷಿತ್ ಶೆಟ್ಟಿ, ಗಣೇಶೋತ್ಸವ ಸಮಿತಿ ಗೌರ ವಾಧ್ಯಕ್ಷರಾದ ಶ್ರೀ ವಿಠಲ್ ಗಾಣಿಗ ,  ಉಡಪಿ ನಗರಸಭಾಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಸದಸ್ಯರಾದ ಶ್ರೀ ಬಾಲಕೃಷ್ಣ ಶೆಟ್ಟಿ ಇವರುಗಳು ಫಲಾನುಭವಿಗಳಿಗೆ ಚೆಕ್ ಹಸ್ತಾಂತರಿಸಿದರು.

 ಕಾರ್ಯಕ್ರಮದಲ್ಲಿ ಜೆಸಿಐ ಘಟಕದ ಸ್ಥಾಪಕ ರಾದ ಜೆಎಫ್ ಡಿ ಎಂ .ಎನ್ ನಾಯಕ್, ಜೆಎಫ್ ಎಂ ಕೇಶವ ಆಚಾರ್ಯ, ಐಪಿಪಿ ಗಣೇಶ ನಾಯ್ಕ್, ಜೆಸಿ ಸತೀಶ್ ನಾಯ್ಕ್, ಜೆಸಿ ಪ್ರಶಾಂತ್, ಜೆಸಿ ವೀಣಾ ನಾಯಕ್, ಜೆಸಿ ಜಯಶ್ರೀ. ಕೆ,  ಜೆ‌ಸಿ ಪಂಚಮಿ,ಜೆಜೆಸಿ ಪ್ರಾರ್ಥನಾ ಹಾಗೂ ಫಲಾನುಭವಿಗಳಾದ ರಮ್ಯಾ ಪೈ, ಪ್ರಿಯಾ ಶೆಟ್ಟಿ, ಸುಜಯ ಆಚಾರ್ಯ,  ಸ್ತುತಿ ಶೆಟ್ಟಿ, ಶಾಲಾ ಮುಖ್ಯೋಪಾ ಧ್ಯಾಯರು ಉಪಸ್ಥಿತರಿದ್ದರು. ಜೆಸಿ ಪ್ರತಿಮಾ ಜೆ. ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ಉಮೇಶ್ ಆಚಾರ್ಯ ಧನ್ಯವಾದ ನೀಡಿದರು.