ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕದ ಪದಾಧಿಕಾರಿಗಳ ವಿಶೇಷ ಸಭೆಯು ಕಾರ್ಕಳದ ಹೊಟೇಲು ಪ್ರಕಾಶದಲ್ಲಿ ನಡೆಯಿತು. ಈ ಸಭೆಯು ಕಾರ್ಕಳ ಕಸಾಪ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ದಶಂಬರ ಆರರಂದು ಶಿರ್ಲಾಲಿನಲ್ಲಿ ಮಹಾಕವಿ ರತ್ನಾಕರ ವರ್ಣಿ ಪ್ರಶಸ್ತಿ ಪುರಸ್ಕೃತ ಕೊಳಕೆ ಇರ್ವತ್ತೂರು ಗುಣಪಾಲ ಕಡಂಬ ಇವರ ಸರ್ವಾಧ್ಯಕ್ಷತೆಯಲಿ ನಡೆಯಲಿರುವ ಕಾರ್ಕಳ ತಾಲೂಕು ಇಪ್ಪತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳ ರೂಪುರೇಶೆಗಳ ಬಗ್ಗೆ ಚರ್ಚಿಸಲಾಯಿತು.
ಅಂತೆಯೇ ಈ ಸಮ್ಮೇಳನದಲ್ಲಿ ಮುಖ್ಯವಾಗಿ ಅಜೆಕಾರು ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್ (ರಿ ) ಗಣಿತ ನಗರ ಜ್ಞಾನ ಸುಧಾ ಇವರ ಪ್ರಾಯೋಜಕತ್ವದಲ್ಲಿ ನೀಡುವ ಉಡುಪಿ ಜಿಲ್ಲಾ ಮಟ್ಟದಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿ ಕವಿ/ಕವಿಯತ್ರಿ ಪ್ರಶಸ್ತಿ ಯನ್ನು, ದಿ.ಪ್ರೊ ಎಂ.ರಾಮಚಂದ್ರರವರ ಹೆಸರಿನಲ್ಲಿ ನೀಡುವುದು. ಅಂತೆಯೇ ಕನ್ನಡ ನಾಡು ನುಡಿಯ ಸೇವೆ ಮಾಡುತ್ತಿರುವ ಉಡುಪಿ ಜಿಲ್ಲೆಯ ಉತ್ತಮ ಸಂಘ ಸಂಸ್ಥೆಗಳನ್ನು ಗುರುತಿಸಿ ಮಾಜಿ ಶಾಸಕ ದಿ ಗೋಪಾಲ ಭಂಡಾರಿಯವರ ಹೆಸರಿನಲ್ಲಿನೀಡುವ ಪ್ರಶಸ್ತಿ ಅಲ್ಲದೇ ರವೀಂದ್ರ ಶೆಟ್ಟಿ ಬಜಗೋಳಿ ಇವರ ಪ್ರಾಯೋಜಕತ್ವದಲ್ಲಿ ನೀಡುವ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡ ತಾಲೂಕಿನ ಅತ್ಯುತ್ತಮ ಕನ್ನಡ ಮಾಧ್ಯಮ ಶಾಲೆಯನ್ನು ಗುರುತಿಸಿ ಕರುನಾಡ ಸಿರಿ ಪ್ರಶಸ್ತಿ ಗೆ ಆಯ್ಕೆ ಮಾಡುವ ಬಗ್ಗೆ ಚರ್ಚಿಸಲಾಯಿತು.
ಅಲ್ಲದೇ ಸಮ್ಮೇಳನಕ್ಕೆ ಪೂರಕವಾಗಿ ಅಕ್ಟೋಬರ್ ತಿಂಗಳಿನಲ್ಲಿ ತಾಲೂಕು ಹಂತದಲ್ಲಿ ಯುವ ಬರೆಹಗಾರರನ್ನು ಪ್ರೋತ್ಸಾಹಿಸುವ ಯುವ ಬರೆಹಗಾರರ ಸಮಾವೇಶವನ್ನು ಆಯೋಜಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಗೌರವ ಕಾರ್ಯದರ್ಶಿ ದೇವದಾಸ ಕೆರೆಮನೆ ಸಂಘಟನಾ ಕಾರ್ಯದರ್ಶಿ ಗಿರೀಶ್ ರಾವ್ ಗಣೇಶ್ ಜಾಲ್ಸೂರು ಸದಸ್ಯರುಗಳಾದ ದೇವುದಾಸ್ ನಾಯಕ್ ಶಿವಸುಬ್ರಹ್ಮಣ್ಯ ಭಟ್ ನಾಗೇಶ್ ನಲ್ಲೂರು ಆಶೀಷ್ ಶೆಟ್ಟಿ ವಸಂತ ಎ ರಮೇಶ್ ಪ್ರಭು ತಿಪ್ಪೆಸ್ವಾಮಿ ಶೈಲಜಾ ಹೆಗ್ಡೆ ಮಾಲತಿ ಜಿ ಪೈ.ಡಾ ಸುಮತಿ ಸುಲೋಚನಾ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಸ್ವಾಗತಿಸಿ ಗೌರವ ಕಾರ್ಯದರ್ಶಿ ದೇವದಾಸ ಕೆರೆಮನೆ ವಂದಿಸಿದರು.