Header Ads Widget

ಕೊಡವೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮ್ಮಾನ, ಬಹುಮಾನ ವಿತರಣೆ

 

ಕೊಡವೂರಿನ 56ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯ ಕ್ರಮದಲ್ಲಿ ಸಾಧಕರಿಗೆ ಸನ್ಮಾನ, ವಿವಿಧ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು.

  ಮಣಿಪಾಲದ ಮಾಹೆಯಿಂದ ಇತ್ತೀಚೆಗೆ ಪಿ.ಎಚ್.ಡಿ ಪಡೆದ ಡಾ| ಪೂಜಾ ಗೋಪಾಲ ಪೂಜಾರಿ, ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 98 ಶೇಖಡಾ ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ನಿವೇದ ಗಾಯತ್ರಿ ಕೆ.ಶಾಸ್ತ್ರಿ ಅವರನ್ನುಸನ್ಮಾನಿಸಲಾಯಿತು.  ಮುಖ್ಯ ಅತಿಥಿ ಶಾಸಕ ಯಶ್ ಪಾಲ್ ಸುವರ್ಣ ರವರು ಮಾತನಾಡಿ ಸಮಾಜದ ಎಲ್ಲರೂ ಒಗ್ಗೂಡಿ  ಸಮಾನತೆಯ ಭಾವದಿಂದ  ,ಶೃದ್ದಾಭಕ್ತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವನ್ನು ಆಚರಿಸುತ್ತಿರುವುದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಹಾಗೆಯೇ ಈ ನಿಟ್ಟಿನಲ್ಲಿ ನಿರಂತರ ಸಮಾಜ ಮುಖಿ ಸೇವಾ ಕಾರ್ಯ ಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.

 ಮಲ್ಪೆ ಶ್ರೀ ನಾರಾಯಣ ಗುರು ಅಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಗೋಪಾಲ್ ಸಿ ಬಂಗೇರ ಅಧ್ಯಕ್ಷತೆ ವಹಿಸಿದ್ದರು‌‌. ಗಣೇಶೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು‌.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ದೇವಾಡಿಗ, ಗೌರವಾಧ್ಯಕ್ಷ ರತ್ನಾಕರ ಅಮೀನ್, ಕಾರ್ಯದರ್ಶಿ ಶರತ್ ಚಂದರ್, ಕೋಶಾಧಿಕಾರಿ ವಾದಿರಾಜ್ ಟಿ ಸಾಲ್ಯಾನ್,ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಯುವಕ ಸಂಘದ ಅಧ್ಯಕ್ಷ ದೀಪಕ್ ವಿ ದೇವಾಡಿಗ ಉಪಸ್ಥಿತರಿ ದ್ದರು.

     ಪ್ರಭಾತ್ ಕೋಟ್ಯಾನ್ ಸ್ವಾಗತಿಸಿದರು, ಸತೀಶ್ ಕೊಡವೂರು ನಿರೂಪಿಸಿದರು. ಪ್ರವೀಣ್ ಜಿ.ಕೊಡವೂರು ವಂದಿಸಿದರು.