ಉಡುಪಿ :- ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ವತಿ ಯಿಂದ ಸಕಾ೯ರಿ ಬಾಲಕಿಯರ ಪ.ಪೂ ಕಾಲೇಜು ಇಲ್ಲಿನ ಎನ್.ಎಸ್.ಎಸ್ ವಿದ್ಯಾಥಿ೯ ಗಳಿಗೆ ಸಹಕಾರಿಯಾಗುವಂತೆ ಸುಮಾರು 13 ಸಾವಿರ ರೂ ಮೊತ್ತದ ಪುಸ್ತಕಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ರವರಿಗೆ ಹಸ್ತಾಂತರಿಸಲಾಯಿತು.
ಖ್ಯಾತ ಸಾಹಿತಿ ಕು.ಗೋ ರವರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು.
ಈ ಸಂದಭ೯ದಲ್ಲಿ ಕಸಾಪ ಉಡುಪಿ ತಾ.ಅಧ್ಯಕ್ಷ ರವಿರಾಜ್ ಹೆಚ್.ಪಿ ರವರು ಪುಸ್ತಕಗಳನ್ನು ಹತ್ತಾಂತರಿಸಿದರು.
ಕಾಯ೯ಕ್ರಮದಲ್ಲಿ ಉಪನ್ಯಾಸಕಿ, ಸಾಹಿತಿ ಸುಧಾ ಅಡುಕಳ, ತಾಲೂಕು ಗೌ.ಕಾಯ೯ದಶಿ೯ ರಂಜಿನಿ ವಸಂತ್, ಮನೆಯೇ ಗ್ರಂಥಾಲಯ ಅಭಿಯಾನ ಸಂಚಾಲಕ ರಾಘವೇಂದ್ರ ಪ್ರಭು, ಕವಾ೯ಲು, ಸಾಮಾಜಿಕ ಜಾಲತಾಣ ಪ್ರಮುಖ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ವಸಂತ್ ಮತ್ತು ವಿದ್ಯಾಥಿ೯ಗಳು ಉಪಸ್ಥಿತರಿದ್ದರು.