ಸಿoಗಾಪುರದ ಅತ್ಯಂತ ಅಲಂಕೃತವಾದ ಬೌದ್ಧರ ಆರಾಧನಾ ಸ್ಥಳಗಳಲ್ಲಿ ಲಿಯಾನ್ ಸ್ಯಾನ್ ಸೀ ದೇವಾಲಯವೂ ಒಂದು.
ಡ್ರಾಗನ್ ಮೌಂಟೇನ್ ಗೇಟ್ ಎಂದೂ ಕರೆಯಲ್ಪಡುವ ಈ ದೇವಾಲಯವು 1917ರಲ್ಲಿ ಸ್ಥಾಪಿಸಲ್ಪಟ್ಟು ಸಿಂಗಾಪುರದ ಲಿಟಲ್ ಇಂಡಿ ಯಾದ ರೇಸ್ ಕೋರ್ಸ್ ಮಾರ್ಗದಲ್ಲಿದ್ದು ಕರುಣೆಯ ದೇವತೆಗೆ ಸಮರ್ಪಿತವಾಗಿದೆ.
ಇಲ್ಲಿನ ಸಂಕೀರ್ಣವಾದ ಅಲಂಕೃತ ಛಾವಣಿಯ ಕೆತ್ತನೆಗಳು, ನೃತ್ಯ ಮಾಡುವ ಸೆರಾಮಿಕ್ ಡ್ರ್ಯಾಗನ್ ಗಳು, ಫೀನಿಕ್ಸ್ ಗಳು, ಕನ್ಫ್ಯೂಷಿ ಯಸ್ ಪ್ರತಿಮೆಗಳು ,ವಿವಿಧ ಆಸನಗಳಲ್ಲಿ ಕುಳಿತ ಬುದ್ಧನ ವಿಗ್ರಹಗಳು, ಮನಮೋಹಕ ಸಾಂಪ್ರದಾಯಿಕ ಚೀನಿ ವಾಸ್ತುಶಿಲ್ಪ ಶೈಲಿಗಳು ಬಹು ಆಕರ್ಷಣೀಯವಾಗಿವೆ.
ಈ ಬೌದ್ಧ ದೇವಾಲಯದ ಮುಂಭಾಗದಲ್ಲಿ ಒಂದು ಕಡೆ ಚೆಂದದ ಚತುರ್ಮುಖ ಬ್ರಹ್ಮನ ಮೂರ್ತಿಯು ಅಂದದ ರಥದಲ್ಲಿ ವಿರಾಜ ಮಾನವಾಗಿದೆ.
ಇನ್ನೊಂದು ಕಡೆ ಸನಾತನ ಹಿಂದೂ ಸಂಪ್ರ ದಾಯ ನೆನಪಿಸುವ ಗರುಡ, ಆನೆ ,ಸಿಂಹಗಳ ಆಳೆತ್ತರದ ಮೂರ್ತಿಗಳಿವೆ .ಒಳಗೆ ಬೌದ್ಧ ಹಾಗೂ ಚೀನಿ ದೇವತಾ ಮೂರ್ತಿ ಗಳೊಂದಿಗೆ ಹಿಂದೂ ಧರ್ಮದ ಪ್ರಮುಖ ದೇವತೆ ಗಣಪತಿಯ ಎರಡು ಅಡಿ ಎತ್ತರದ ಕಂಚಿನ ವಿಗ್ರಹವು ದೇವಾಲಯದ ಒಳ ಹೊಕ್ಕ ಕೂಡಲೇ ಸ್ವಾಗತಿಸುತ್ತದೆ.
ವಿವಿಧ ಆಕಾರಗಳಲ್ಲಿ ವಿಶಿಷ್ಟವಾಗಿ ಅಲಂಕೃತ ವಾದ ಕನ್ಫ್ಯೂಸಿಯಸ್ ಹಾಗೂ ಬುದ್ಧನ ಮೂರ್ತಿಗಳು ಆಕರ್ಷಕ ಚೀನಿ ಸಾಂಪ್ರದಾಯಿಕ ವಾಸ್ತುಶಿಲ್ಪಗಳು,ಉರಿವ ದೀಪ ಜ್ಯೋತಿ ಹೊತ್ತ ದೀಪ ಸ್ತಂಭಗಳು, ಮನಸೆಳೆಯುವ ಪುಟ್ಟ ಪುಟ್ಟ ಕಲಾತ್ಮಕ ಮೇಣದ ಬುಡ್ಡಿಗಳು, ದೊಡ್ಡ ದೊಡ್ಡ ಅಗರಬತ್ತಿಗಳು, ಓಂ ಫಲಕ, ಪ್ರಶಾಂತವಾದ ವಾತಾವರಣದಲ್ಲಿ ಮೆಲುವಾದ ಸಂಗೀತ,, ಚೀನೀಯರ ವಿಶೇಷ ಜೀವನ ಶೈಲಿಯ ಬಗ್ಗೆ ವಿಶಿಷ್ಟ ವ್ಯಕ್ತಿಗಳ ಬಗ್ಗೆ, ಅಲ್ಲಿನ ಜನ ಜೀವನದಲ್ಲಿ ಉಪಯೋಗಿಸುವ ವಿಭಿನ್ನ ಸಾಂಪ್ರದಾಯಿಕ ವಸ್ತುಗಳ ಬಗ್ಗೆ ಅವರಿಗಿರುವ ಒಲವು ತೋರುವ ಒಂದಷ್ಟು ಕಲಾತ್ಮಕ ವಸ್ತು ಗಳನ್ನು ಕೂಡಾ ನಾವು ಅಲ್ಲಿ ಕಾಣಬಹುದು.
ಅಲ್ಲದೆ ಧ್ಯಾನಸ್ಥ ಬುದ್ಧ, ಲಾಫಿಂಗ್ ಬುದ್ಧ ಸ್ಲೀಪಿಂಗ್ ಬುದ್ಧ ಹೀಗೆ ಬುದ್ಧನ ಬಹಳಷ್ಟು ವಿಗ್ರಹಗಳು ಗಮನ ಸೆಳೆಯುತ್ತವೆ.
ಈ ಬುದ್ಧ ದೇವಾಲಯದ ಅಂದ ಚೆಂದವನ್ನು ನೋಡಿಯೇ ಅನುಭವಿಸಬೇಕು. ಹಾಗಾಗಿ ಸಿಂಗಾಪುರಕ್ಕೆ ಭೇಟಿ ನೀಡಿದಾಗ ಬುದ್ಧನ ಲಿಯಾಂಗ್ ಸ್ಯಾನ್ ಸೀ ದೇವಾಲಯ ವನ್ನೊಮ್ಮೆ ಸಂದರ್ಶಿಸಿ.
✍️ಪೂರ್ಣಿಮಾ ಜನಾರ್ದನ್