ಚೆನ್ನೈ ಮಹಾನಗರದಲ್ಲಿ ನಡೆದ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ 37 ನೇ ಚಾತುರ್ಮಾಸ್ಯ ವ್ರತದ ಸಮಾರೋ ಸಮಾರಂಭ ಮತ್ತು ಗುರುವಂದನೋತ್ಸವವು ಮಂಗಳವಾರ ಸಂಜೆ ಅನೇಕ ಗಣ್ಯರು ಹಾಗೂ ನೂರಾರು ಭಕ್ತರ ಉಪಸ್ಥಿತಿಯಲ್ಲಿ ನೆರವೇರಿತು . ಮುಖ್ಯ ಅಭ್ಯಾಗತರಾಗಿ ಮೂಲತಃ ಕರ್ನಾಟಕದವರಾದ ಇತ್ತೀಚೆಗಷ್ಟೆ ಮೇಘಾಲಯ ರಾಜ್ಯದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಸಿ ಎಚ್ ವಿಜಯಶಂಕರ್ ಅವರಿಗೆ ಶ್ರೀ ಮಠದ ವತಿಯಿಂದ ಶ್ರೀ ರಾಮವಿಠಲ ಕೃಷ್ಣಾನುಗ್ರಹ ಪ್ರಶಸ್ತಿಯನ್ನು ಶ್ರೀಗಳವರು ಪ್ರದಾನಿಸಿ ಅನುಗ್ರಹಿಸಿದರು .