ಹೊಸ ಪರಿಷ್ಕೃತ ಪಠ್ಯಕ್ರಮಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದ್ದಲ್ಲಿ ತನ್ಮೂಲಕ ವಿದ್ಯಾರ್ಥಿಗಳು ಆರ್ಥಿಕತೆಯತ್ತ ಗಮನ ಹರಿಸಲು ಸಹಾಯಕವಾಗುತ್ತದೆ, ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿ ಸಮೂಹವನ್ನು ಬೆಂಬಲಿಸಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ಇಲ್ಲಿಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ ಹರೀಶ್ ಜೋಶಿ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪೂರ್ಣಪ್ರಜ್ಞ ಕಾಲೇಜು ಉಡುಪಿಯ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಹಾಗೂ ಮಂಗ ಳೂರು ವಿಶ್ವವಿದ್ಯಾನಿಲಯದ ವ್ಯವಹಾರ ಅಧ್ಯಯನ ಮತ್ತು ನಿರ್ವಹಣಾ ಅಧ್ಯಾಪಕರ ಒಕ್ಕೂಟ ಇವರು ಜಂಟಿಯಾಗಿ ಏರ್ಪಡಿಸಿದ ರಾಜ್ಯ ಹೊಸ ಶಿಕ್ಷಣ ನೀತಿಯ ಅನುಸಾರ ಬಿಬಿಎ ಪರಿಷ್ಕೃತ ಪಠ್ಯಕ್ರಮಗಳ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಗಾರವನ್ನು ಉದ್ಘಾಟಿಸಿದ ಶ್ರೀಯುತರು ಅಧ್ಯಾಪಕರುಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಾಗಾರ ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ರಾಮು. ಎಲ್ ಇವರು ಮಾತನಾಡಿ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ, ಅಧ್ಯಾಪಕರ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಅಧ್ಯಾಪಕರ ಒಕ್ಕೂಟವನ್ನು ಶ್ಲಾಘಿಸಿದರು.
ಕಾರ್ಯಾಗಾರದಲ್ಲಿ ಬಿಬಿಎ ಅಧ್ಯಾಪಕರ ಒಕ್ಕೂಟ (FOBMAT) ದ ಅಧ್ಯಕ್ಷ ಡಾ. ಚಂದ್ರಶೇಖರ್, ಕಾರ್ಯದರ್ಶಿ ಪ್ರೊ. ನಂದ ಕಿಶೋರ್, ಕೋಶಾಧಿಕಾರಿ ಪ್ರೊ. ಹಾರ್ದಿಕ್ ಪಿ. ಚೌಹಾನ್, ಪೂರ್ಣ ಪ್ರಜ್ಞಾ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ.ವಿನಯ್ ಕುಮಾರ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಶಿವಕುಮಾರ್, ಕಾರ್ಯಗಾರದ ಸಂಯೋಜಕ ರಾದ ಪ್ರೊ. ಸೌಮ್ಯ ಶೆಟ್ಟಿ ಹಾಗೂ ಪ್ರೊ. ಅಪೂರ್ವ ಓಸ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಿಶ್ವ ವಿದ್ಯಾನಿಲಯದ ವಿವಿಧ ಕಾಲೇಜುಗಳು ಸುಮಾರು 85 ಉಪನ್ಯಾಸಕರುಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಪ್ರೊ. ಧನ್ಯಶ್ರೀ ಕಾರ್ಯಕ್ರಮ ನಿರ್ವಹಿಸಿ ಪ್ರತಿಭಾ ಭಟ್, ವಾಗ್ದೇವಿ ಮಧ್ಯಸ್ಥ ಪ್ರಾರ್ಥಿಸಿದರು. ಅಪೂರ್ವ ಓಸ್ಟ ವಂದಿಸಿದರು. ಜಯಲಕ್ಷ್ಮಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಿರ್ವಹಿಸಿದರು.