Header Ads Widget

ಎಂ. ಜಿ. ಎಂ ಸಂಧ್ಯಾ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

 


ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು ಉಡುಪಿ ಇದರ ಆಶ್ರಯದಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. 


ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಾದ ಡಾ. ಬಿ .ಜಗದೀಶ್ ಶೆಟ್ಟಿ ಆಡಳಿತ ಅಧಿಕಾರಿ ಗಳು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮಾಹೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು .

 ಶಿಕ್ಷಣದ ಮಹತ್ವ ಮತ್ತು ವಿದ್ಯಾರ್ಥಿಗಳ ಪಾತ್ರ ಈ ವಿಚಾರದ ಕುರಿತು ಔಚಿತ್ಯಪೂರ್ಣವಾಗಿ ಮಾತನಾಡುತ್ತಾ ವಿದ್ಯಾರ್ಥಿ ಬದುಕಿನಲ್ಲಿ ಸಾಧನೆಯ ಶಿಖರವನ್ನು ಇರುವ ಕಡೆ ಗಮನವಿದ್ದಾಗ ಏನನ್ನು ಕೂಡ ಸಾಧಿಸಲು ಸಾಧ್ಯ ಎಂಬ ಸ್ಪೂರ್ತಿದಾಯಕ ವಿಚಾರಗಳನ್ನು ತಿಳಿಸಿದರು.   

 

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾಗಿ ಡಾ. ಎಸ್. ದೇವಿದಾಸ್ ನಾಯ್ಕ ಪ್ರಾಂಶುಪಾಲರು ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು ಹಾಗೂ  ಗಣಕ ವಿಜ್ಞಾನ ವಿಭಾಗದ ಸಂಯೋ ಜಕರು    ಡಾ. ಎಂ ವಿಶ್ವನಾಥ ಪೈ ವಾಣಿಜ್ಯ ಶಾಸ್ತ್ರ ವಿಭಾಗದ ಸಂಯೋಜಕರು ಡಾಕ್ಟರ್ ಮಲ್ಲಿಕಾ ಎ ಶೆಟ್ಟಿ ಉಪಸ್ಥಿತರಿದ್ದರು.    

 ಕಾರ್ಯಕ್ರಮವನ್ನು ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಕುಮಾರಿ ವರ್ಷಣಿ  ಕೋಟ್ಯಾನ್ ಸ್ವಾಗತಿಸಿ ವಾಣಿಜ್ಯಶಾಸ್ತ್ರ ವಿಭಾಗದ ಉಪ ನ್ಯಾಸಕ ಶ್ರೀ ಸನತ್ ಕೋಟ್ಯಾನ್ ಧನ್ಯವಾದ ಗೈದರು. ಕನ್ನಡ ವಿಭಾಗದ ಉಪನ್ಯಾಸಕಿ ಕುಮಾರಿ ದೀಪಿಕಾ ಕೋಟ್ಯಾನ್ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.