ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಅವರ ಜಂಟಿ ಆಶ್ರಯ ದಲ್ಲಿ ನಡೆದ ಟೆಕ್ ಪ್ಲಸ್ ಶಿಕ್ಷಕರ ತರಬೇತಿ ಕಾರ್ಯಕ್ರಮ ದಲ್ಲಿ ಮುಖ್ಯ ಭಾಷಣಕಾರರಾಗಿ ಉಡುಪಿ ಡಯಟ್ ನ ಉಪಪ್ರಾಂಶುಪಾಲ ಡಾ ಅಶೋಕ್ ಕಾಮತರು ಮಾತನಾಡುತ್ತಾ ಶಿಕ್ಷಕರು ಬದಲಾಗುವ ಪರಿಸ್ಥಿತಿ ಯಲ್ಲಿ ತಮ್ಮನ್ನುಒಗ್ಗಿಸಿಕೊಂಡು ಸೂಕ್ತಜ್ಞಾನ ವನ್ನು ಪಡೆದು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕೆಂದು ಕರೆನೀಡಿದರು.
ಉಡುಪಿ ಡಯಟ್ ಅನುದಾನ ರಹಿತ ಶಾಲಾಶಿಕ್ಷಕರಿಗೂ ತರಬೇತಿ ನೀಡುತ್ತಾ ಇದೆ. ಅದರ ಸಂಪೂರ್ಣ ಉಪಯೋಗ ಪಡೆ ಯುವಂತೆ ತಿಳಿಸಿದರು. ಪ್ರಾರಂಭದಲ್ಲಿ ಇನ್ನರ್ ವೀಲ್ ಅದ್ಯಕ್ಷೆ ಸುರೇಖ ಕಲ್ಕೂರ್ ಸ್ವಾಗತಿಸಿ ದರು.
ಸೋದೆ ವಾದಿರಾಜಮಠ ಟ್ರಸ್ಟ್ ನ ಕಾರ್ಯ ದರ್ಶಿ ರತ್ನಕುಮಾರ್ ಅವರು ಉದ್ಘಾಟಿಸಿ ರೋಟರಿಯು ಇಂತಹ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಅಭಿನಂದಿಸಿ ಇದರ ಸಂಪೂರ್ಣ ಸದುಪಯೋಗ ಪಡೆಯುವಂತೆ ಕರೆನೀಡಿದರು.
ರೋಟರಿ ಅದ್ಯಕ್ಷ ರೋ. ಗುರುರಾಜ ಭಟ್ ಸಹಕರಿಸಿದ ಎಲ್ಲರನ್ನೂ ಅಭಿವಂದಿಸಿ ಭವಿಷ್ಯದ ಪ್ರಜೆಗಳನ್ನು ಹೊಸ ತಂತ್ರಜ್ಞಾನದಲ್ಲಿ ಪರಿಣಿತರಾಗುವಂತೆ ಮಾಡುವ ನಮ್ಮ ಪ್ರಯತ್ನದಲ್ಲಿ ಎಲ್ಲರು ಸಹಕರಿಸಬೇಕೆಂದು ಕರೆನೀಡಿದರು.
ವಲಯ ಸೇನಾನಿ ಹೇಮಂತಕಾಂತ್ ಕಾರ್ಯ ಕ್ರಮ ಕ್ಕೆ ಶುಭ ಕೋರಿದರು. ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ ದನ್ಯವಾದ ಸಮ ರ್ಪಿಸಿದರು. ರೋ.ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.
ಶ್ರೀಮತಿ ಶಬನಮ್ ಪ್ರವೀಣ್ ಶೇಖ್ ಅವರು ಇಂಗ್ಲೀಷ್ ವಿಷಯದ ಬಗ್ಗೆ ಶ್ರೀ ಗಣೇಶ್ ಶಟ್ಟಿಗಾರ್ ಗಣಿತದ ಬಗ್ಗೆ ಮತ್ತು ಡಯಟ್ ನ ಉಪನ್ಯಾಸಕ ಶ್ರೀ ಯೋಗನಾರಸಿಂಹ ಅವರು ಶಿಕ್ಷಣ ದಲ್ಲಿ ತಂತ್ರಜ್ಞಾನ ದ ಉಪಯೋಗದ ಬಗ್ಗೆ ತರಬೇತಿ ನೀಡಿದರು. ಸಮಾರೋಪ ಸಮಾ ರಂಭದಲ್ಲಿ ಶ್ರೀಮತಿ ರೂಪಾ ಕಿಣಿಯವರು ಮಾತಾಡುತ್ತಾ ಭಾಗವಹಿಸಿದ ಎಲ್ಲಾ ಶಿಕ್ಷಕರು ಇಲ್ಲಿ ಪಡೆದ ತರಬೇತಿಯ ಸಂಪೂರ್ಣ ಉಪಯೋಗ ಪಡೆದು ರೋಟರಿಯ ಈ ಪ್ರಯತ್ನದ ಯಶಸ್ಸಿನಲ್ಲಿ ಸಹಕರಿಸಬೇಕೆಂದು ಕರೆನೀಡಿದರು.
ರೋಟರಿ ಮತ್ತು ಇನ್ನರ್ ವೀಲ್ ಸಂಸ್ಥೆಯ ಅನಂತರಾಮ ಬಲ್ಲಾಳ, ಸುಬ್ರಹ್ಮಣ್ಯ ಕಾರಂತ್, ಪದ್ಮಿನಿ ಭಟ್, ಶುಭ ಬಾಸ್ರ್ರಿ, ಸಾದನಾ ಮುಂಡ್ಕೂರ್, ವನಿತಾ ಉಪಾ ಧ್ಯಾಯ, ಶಾಲಿನಿ ರಾಘವೇಂದ್ರ ಮತ್ತು ಕಡಿಯಾಳಿ ಶಾಲೆಯ ಆಡಳಿತ ಅಧಿಕಾರಿ ಪ್ರಭಾವತಿ ಅಡಿಗ ಉಪಸ್ಥಿತರಿದ್ದರು.