ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಹಮ್ಮಿಕೊಂಡಿರುವ 9 ದಿನಗಳ ವಾರ್ಷಿಕ ಸಂಗೀತೋತ್ಸ ವವನ್ನು, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಡಿಪಾರ್ಟ್ಮೆಂಟ್ ಆಫ್ ಸೋಶಿಯಲ್ ಸೈನ್ಸ್ ಇದರ ಡೀನ್ ಬಿಂದಾ ಪರಾಂಜಪೆ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಅವರನ್ನು ಗೌರವಿಸಲಾಯಿತು.
ಮುಂದಿನ 9 ದಿನಗಳ ಕಾಲ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾವಿದರಿಂದ ಗುಣಮಟ್ಟದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನದ ಕಾರ್ಯಕ್ರಮದಲ್ಲಿ ನಾಗೇಶ್ ಬಪ್ಪ ನಾಡು ಮತ್ತು ತಂಡದವರಿಂದ ನಾಗಸ್ವರ ವಾದನ, ವಿದ್ವಾಂಸರಾದ ಡಾ. ಬಿಂದಾ ಪರಾಂಜಪೆ ಅವರಿಂದ, *ಕಲಾಕ್ಷೇತ್ರಕ್ಕೆ ದೇವದಾಸಿಯರ ಕೊಡುಗೆ* ಕುರಿತು ಉಪನ್ಯಾಸ ನಡೆಯಿತು.
ರಮಣ ಬಾಲಚಂದ್ರನ್ ಅವರು ವೀಣಾವಾದನದ ಮೂಲಕ ಮೊದಲ ದಿನದ ಪ್ರಧಾನ ಸಂಗೀತ ಕಾರ್ಯ ಕ್ರಮ ನಡೆಸಿಕೊಟ್ಟರು.
ರಂಜನಿ ಮೆಮೋರಿಯಲ್ ಟ್ರಸ್ಟ್ ನ ಮುಖ್ಯಸ್ಥ ಪ್ರೊ. ಅರವಿಂದ ಹೆಬ್ಬಾರ್ ಸ್ವಾಗತಿಸಿದರು. ಯುವಕಲಾವಿದೆ ಸಮನ್ವಿ ಧನ್ಯವಾದವಿತ್ತರು.