Header Ads Widget

ಮಾನಸಿಕ ಆರೋಗ್ಯ ಕುರಿತು ಮನದ ಮಾತು

 

ಮಣಿಪಾಲದ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ *ರೇಡಿಯೋ ಮಣಿಪಾಲ್* ಸಮುದಾಯ ಬಾನುಲಿ ಕೇಂದ್ರ ಮತ್ತು ಉಡುಪಿಯ ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಸಹಯೋಗದಲ್ಲಿ  *ಮನದ ಮಾತು* ಮಾನಸಿಕ ಆರೋಗ್ಯ ಕುರಿತು ಸರಣಿ ಕಾರ್ಯಕ್ರಮದ *21* ನೇ ಸಂಚಿಕೆ ಸೆಪ್ಟೆಂಬರ್ ತಿಂಗಳ 20ರಂದು ಶುಕ್ರವಾರ ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ ಮತ್ತು  ಶನಿವಾರ ಮಧ್ಯಾಹ್ನ 1 ಗಂಟೆಗೆ ಮರುಪ್ರಸಾರವಾಗಲಿದೆ.

  ಈ ವಾರದ  ಸಂಚಿಕೆಯಲ್ಲಿ *ಉಡುಪಿಯ ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿ ಮತ್ತು ಆಪ್ತ ಸಮಾಲೋಚಕ ರಾಗಿರುವ ಸೌಜನ್ಯ ಶೆಟ್ಟಿ* ಅವರು *ಒಡಹುಟ್ಟಿ ದವರ ಪೈಪೋಟಿ* ಎಂಬ ವಿಷಯದ ಕುರಿತು ವಿಶೇಷ ಮಾಹಿತಿ ನೀಡಲಿದ್ದಾರೆ.

ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal

ಮತ್ತು ಐಫೋನ್ ನ

https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ

ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.