Header Ads Widget

ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘ : ವಾರ್ಷಿಕ ಸಾಮಾನ್ಯ ಸಭೆ


ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ 2023 _24 ಮೇ ಸಾಲಿನ19ನೇ ವಾರ್ಷಿಕ ಸಾಮಾನ್ಯ ಸಭೆಯು ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ರವರ* ಅಧ್ಯಕ್ಷತೆಯಲ್ಲಿ , ಸಾಣೂರು ಸುವರ್ಣ ಗ್ರಾಮೋದಯ ಸೌಧದ ಸಭಾಭವನದಲ್ಲಿ ಸೆಪ್ಟೆಂಬರ್ 16 ಸೋಮವಾರದಂದು ಜರುಗಿತು.

ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹಾಲಿಗೆ ವೈಜ್ಞಾನಿಕ ದರ ನಿಗದಿ ಮಾಡಿದರೆ ಮಾತ್ರ ಮುಂದಿನ ವರ್ಷಗಳಲ್ಲಿ ಹೈನುಗಾರಿಕೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪಶು ಆಹಾರದ ಬಳಕೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಸಿರು ಮೇವು ಹಾಗೂ ರಸಮೇವಿನ ಉತ್ಪಾದನೆ ಮತ್ತು ಬಳಕೆಯಿಂದ ಹಿಂಡಿಯ ಖರ್ಚು ಕಡಿಮೆಯಾಗಿ, ಹೈನುಗಾರಿಕೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ. 

ಒಕ್ಕೂಟದ ಪ್ರೋತ್ಸಾಹಕ ಯೋಜನೆಗಳಾದ ಮಿಶ್ರ ತಳಿ ಕರು ಯೋಜನೆ, ಸಾಮೂಹಿಕ ರಾಸು ವಿಮಾ ಯೋಜನೆ, ಮಿನಿ ಡೈರಿ ಮತ್ತು ವಾಣಿಜ್ಯ ಡೈರಿ ಘಟಕ, ಹಸಿರು ಮೇವಿನ ತಾಕು ಅಭಿವೃದ್ಧಿ ಮೊದಲಾದ ಯೋಜನೆಗಳ ಅನುಷ್ಠಾನದ ಮೂಲಕ ಗರಿಷ್ಠ ಲಾಭವನ್ನು ಪಡೆಯಬೇಕೆಂದು ಕರೆ ನೀಡಿದರು. 

ಒಕ್ಕೂಟದ ವಿಸ್ತರಣಾಧಿಕಾರಿಯಾದ ಶ್ರೀ ಶಿವಕುಮಾರ್ ರವರು ಸಂಘದ 2023-24 ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ, ಲೆಕ್ಕಪರಿಶೋಧನೆಯಲ್ಲಿ ಕಳೆದ ಹಲವಾರು ವರ್ಷಗಳಿಂದ 'ಎ' ಶ್ರೇಯಾಂಕವನ್ನು ಪಡೆಯುತ್ತಿದ್ದು, ಸದಸ್ಯರಿಗೆ 15 % ಡಿವಿಡೆಂಡ್ ಮತ್ತು 65% ಶೇಕಡ ಬೋನಸ್ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಒಕ್ಕೂಟದ ವತಿಯಿಂದ ರೈತರಿಗೆ ಸಿಗುವ ಹಲವಾರು ಸೌಲಭ್ಯಗಳ ವಿವರವನ್ನು ನೀಡಿದರು.

ನಿರ್ದೇಶಕರು ಗಳಾದ ಶ್ರೀ ಜಯ ಶೆಟ್ಟಿಗಾರ್ ರವರು ವಾರ್ಷಿಕ ವರದಿಯನ್ನು ಮಂಡಿಸಿದರು.

ಶ್ರೀ ಸೋಮಶೇಖರ್ ರವರು 2024_25 ನೇ ಸಾಲಿನ ಕಾರ್ಯ ಯೋಜನೆಗಳ ವಿವರ ನೀಡಿದರು. 

ಶ್ರೀ ರಾಯಲ್ ನೊರನ್ನಾರವರು ಆಡಳಿತ ಮಂಡಳಿ ಸದಸ್ಯರ ಪದಾಧಿಕಾರಿಗಳ ಮತ್ತು ನೌಕರರ ನೀತಿ ಸಂಹಿತೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯದರ್ಶಿ ಶ್ರೀ ಸಂತೋಷ ಶೆಟ್ಟಿ ಯವರು ಅಂದಾಜು ಆಯವ್ಯಯವನ್ನು ಮಂಡಿಸಿದರು.

ಸಂಘಕ್ಕೆ ಗರಿಷ್ಠ ಹಾಲು ಪೂರೈಸಿದ ಶ್ರೀಮತಿ ಮಾಲತಿ, ಶ್ರೀ ರಾಯಲ್, ಡಾ ನಾಗರತ್ನ, ಶ್ರೀಧರ ಸಮಗಾರ* ಶ್ರೀರಘುರಾಮ್ ಪೂಜಾರಿ, ಶ್ರೀಮತಿಪ್ರೇಮಾಶೆಟ್ಟಿ, ಶ್ರೀಸೋಮಶೇಖರ ರಾವ್, ಶ್ರೀಮತಿ ಲಿಯೋನಿಲ್ಲಾ ಡಿಸೋಜಾ, ಶ್ರೀಮತಿ ಶಾಮಲಾ, ಶ್ರೀ ಜಾನಪ್ಪ ಮೂಲ್ಯರವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. 

ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಾದ ಪ್ರಜ್ಞಾ ಅಮೂಲ್ಯ, ಲಕ್ಷ್ಮಿತಾ ಡಿ ಕುಲಾಲ್, ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಅನನ್ಯ ಪೂಜಾರಿ, ನಿಖಿಲ್ ಡಿಸೋಜಾ, ಆನಿ ಅಮೃತ ಡಿ'ಸೋಜರವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. 

ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಸಿದ ಶ್ರೀ ಸೈಮನ್ ಪಿಂಟೋ, ಶ್ರೀಜಯಾನಂದ ಮೂಲ್ಯ, ಶ್ರೀವಾಸು ಶೆಟ್ಟಿಯವರಿಗೆ ಗೌರವ ಪುರಸ್ಕಾರ ನೀಡಲಾಯಿತು. 

ಸಂಘದ ಸ್ಥಾಪಕ ಅಧ್ಯಕ್ಷರಾದ ಶ್ರೀ ಕೊರಗಶೆಟ್ಟಿ, ಮಾಜಿ ಅಧ್ಯಕ್ಷರಾದ ಶ್ರೀ ಶ್ರೀಧರ ಸಮಗಾರ ನಿರ್ದೇಶಕರುಗಳಾದ ಶ್ರೀ ಜಯಮೂಲ್ಯ, ಶ್ರೀ ವಿಶ್ವನಾಥ ಶೆಟ್ಟಿಗಾರ್ ,ಶ್ರೀಮತಿ ಸಂಜೀವಿ ಉಪಸ್ಥಿತರಿದ್ದರು. 

ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಯಶೋಧ. ಆರ್. ಸುವರ್ಣ ರವರು ಸ್ವಾಗತಿಸಿ, ನಿರ್ದೇಶಕರಾದ ಶ್ರೀ ಪ್ರವೀಣ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು. ಹಾಲು ಪರೀಕ್ಷಕಿ ಶ್ರೀಮತಿ ಪ್ರಮೀಳಾ ರವರು ಧನ್ಯವಾದ ಸಮರ್ಪಣೆ ಗೈದರು.