ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ 81ನೇ ದಿನದ ಪ್ರದಕ್ಷಿಣೆ ಸೋಮವಾರ ಸೆ.2 ರಂದು ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ಅರ್ಚಕರಾದ ರಂಗನಾಥ ಭಟ್ ರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂ ಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಲಾಯಿತು..
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿ ಪಿ.ಆರ್ ಗುರು ರಾವ್, ಮ್ಯಾನೇಜರ್ ಸತ್ಯ ನಾರಾಯಣ , ವಿಜಯಕುಮಾರ್ ಶೆಟ್ಟಿ ಕೊಂಡಾಡಿ , ವಿಶ್ವಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಅಶೋಕ್ ಜೋಗಿ , ಗ್ರಾಪಂ ಸದಸ್ಯ ಉಮೇಶ್ ಶೆಟ್ಟಿ , ಹರೀಶ್ ಶೆಟ್ಟಿ , ನಾಟಿ ವೈದ್ಯ ಭಾಸ್ಕರ್ ಪೂಜಾರಿ, ಪ್ರಶಾಂತ್ ಕುಮಾರ್ ಹಿರಿಯಡ್ಕ , ಪ್ರಕಾಶ್ ಶೆಟ್ಟಿ ಪುತ್ತಿಗೆ , ಗಿರೀಶ್ ಪ್ರಭು, ರಾಘವೇಂದ್ರ ಪ್ರಭು, ಕವಾ೯ಲು ಜಿ.ಪಂ ಮಾಜಿ ಸದಸ್ಯೆ ಗೀತಾಂಜಲಿ ಎಮ್.ಸುವರ್ಣ, ವೀಣಾ ಎಸ್.ಶೆಟ್ಟಿ , ಶಿಲ್ಪಾ ಮಹೇಶ್ ಜತನ್ , ಸತೀಶ್ ದೇವಾಡಿಗ, ಶಶಾಂಕ್, ಅಂಕಿತ್, ಆರ್ಯನ್ ಮುಂತಾದವರು ಉಪಸ್ಥಿತ ರಿದ್ದರು.