ಮಲ್ಪೆ: ಬಾಯಿಗೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಉಗುಳುವ ವೇಳೆ ವ್ಯಕ್ತಿಯೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟ ಅಪರೂಪ ಘಟನೆ ಗುರುವಾರ (ಸೆ. 12) ಸಂಭವಿಸಿದೆ.
ಮಲ್ಪೆಯ ಸತೀಶ್ (39) ಅವರು ಸಾವನ್ನಪ್ಪಿದ್ದು, ಸೆ. 9ರಂದು ಮಲ್ಪೆ ಬೀಚ್‌ನಲ್ಲಿ ಗಣೇಶ ವಿಸರ್ಜನ ಮೆರವಣಿಗೆ ವೇಳೆ ಸ್ವ ಇಚ್ಚೆಯಿಂದ ಅವರು ಬಾಯಿಗೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿಯೊಂದಿಗೆ ಹೊರಕ್ಕೆ ಉಗುಳುತ್ತಿದ್ದರು. ಈ ಸಮಯದಲ್ಲಿ ಆಕಸ್ಮಿಕವಾಗಿ ಸೀಮೆ ಎಣ್ಣೆ ಅವರ ಹೊಟ್ಟೆಯೊಳಗೆ ಹೋಗಿದೆ ಎನ್ನಲಾಗಿದೆ. ತೀವ್ರ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟರು.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.