Header Ads Widget

ನಿಪುಣ್ ಪರೀಕ್ಷೆ ಹಾಗೂ ನಾಯಕತ್ವ ಶಿಬಿರ

ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ವತಿಯಿಂದ ಜಿಲ್ಲಾ ಮಟ್ಟದಲ್ಲಿ ನಿಪುಣ್ ಪರೀಕ್ಷೆ ಹಾಗೂ ನಾಯಕತ್ವ ಶಿಬಿರವನ್ನು  ಡಾ.ವಿಎಸ್ ಆಚಾರ್ಯ ಜಿಲ್ಲಾ ತರಬೇತಿ ಕೇಂದ್ರ, ಪ್ರಗತಿ ನಗರ, ಮಣಿಪಾಲದಲ್ಲಿ ಮೂರು ದಿನಗಳ ಕಾಲ ನಡೆಸಲಾಯಿತು.

ಈ ಪರೀಕ್ಷೆಯ ಶಿಬಿರ ನಾಯಕರಾಗಿ ವಿತೇಶ್ ಕಾಂಚನ್ ಹಾಗೂ ಫ್ಲೋರಿನ್ ಮಿಲಾಗ್ರಿಸ್  ಕಾಲೇಜ್, ಅರವಿಂದ್  ಸರಕಾರಿ ಪಿಯು ಕಾಲೇಜ್ ಸಾಣೂರು, ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ ಅಡಿಗ, ಸೀನಿಯರ್ಸ್ ರೋವರ್, ರೇಂಜರ್ಸ್ ಗಳಾದ ಮಾಸ್ಟರ್ ವಿಜಯ್, ಮಾಸ್ಟರ್ ದರ್ಶನ್, ಮಾಸ್ಟರ್ ವಿಘ್ನೇಶ್, ಕುಮಾರಿ ನಿರ್ಮಲ, ಕುಮಾರಿ ಪ್ರತಿಮಾ ಇವರೆಲ್ಲ ಸಹಕಾರದಿಂದ ಪರೀಕ್ಷೆ ಹಾಗೂ ತರಬೇತಿಯು ಯಶಸ್ವಿಯಾಗಿ ನಡೆಯಿತು 
ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ಮುಖ್ಯ ಆಯುಕ್ತ  ಇಂದ್ರಾಳಿ ಜಯಕರ್  ಶೆಟ್ಟಿ ಇವರು  ಭೇಟಿಕೊಟ್ಟು ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.