Header Ads Widget

ಕನ್ನರ್ಪಾಡಿ ಶ್ರೀ ಶಾರದೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ನಾಗಭೂಷಣ್ ಶೇಟ್ ಆಯ್ಕೆ


ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ, ಕಿನ್ನಿಮುಲ್ಕಿ ಕನ್ನರ್ಪಾಡಿ ಇದರ ವತಿಯಿಂದ ಸಪ್ತಮ ವರ್ಷದ ಶ್ರೀ ಶಾರದಾ ಮಹೋತ್ಸವವು ದಿನಾಂಕ 9-10-2024 ರಿಂದ 12-10-2024ರ ವರೆಗೆ ನಡೆಯಲಿದ್ದು, ಆ ಬಗ್ಗೆ ಮಹಾಸಭೆ ಮತ್ತು ಪ್ರಥಮ ಪೂರ್ವಭಾವಿ ಸಭೆಯು ಭಾನುವಾರ ಕಿನ್ನಿ ಮುಲ್ಕಿಯ ವೀರಭದ್ರ ಕಲಾಭವನದಲ್ಲಿ ನಡೆದು ಮುಂದಿನ ಮೂರು ವರ್ಷಗಳ ಅವಧಿಗೆ ನಾಗಭೂಷಣ್ ಶೇಟ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.  

ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ಕಿನ್ನಿಮುಲ್ಕಿ, ಕೋಶಾಧಿಕಾರಿಯಾಗಿ ರಾಜಶಂಕರ ನಾವುಡ ಅವರನ್ನು ನೇಮಿಸಲಾಯಿತು.

ಸಭೆಯಲ್ಲಿ ಸ್ಥಾಪಕಾಧ್ಯಕ್ಷರಾದ ಹೆಚ್. ಜಯಪ್ರಕಾಶ್ ಕೆದ್ಲಾಯ, ಅಧ್ಯಕ್ಷರಾದ ಉದಯ್ ಕುಮಾರ್, ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಪ್ರಭಾಶಂಕರ್ ಪದ್ಮಶಾಲಿ, ಉಡುಪಿ ನಗರಸಭಾ ಸದಸ್ಯರಾದ ಮಂಜುನಾಥ ಮಣಿಪಾಲ, ಪ್ರಧಾನ ಕಾರ್ಯದರ್ಶಿ ದೇವದಾಸ್ ವಿ. ಶೆಟ್ಟಿಗಾರ್, ಕೋಶಾಧಿಕಾರಿ ಅರವಿಂದ ಬಿ. ಪದ್ಮಶಾಲಿ, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.