Header Ads Widget

ಆತ್ಮ ವಿಶ್ವಾಸದ ಪ್ರತೀಕ ಸೈಕಲಿಂಗ್ ಸಾಧಕಿ - ಸಿಂಧು ಮಯ್ಯ

 


ಶ್ರೀ ಶಶಾಂಕ್ ಧನ್ವೇಯವರು ಖಾಸಗಿಯಾಗಿ ಸೆಪ್ಟೆಂಬರ್ 4 ರಿಂದ - 9 ರ ವರೆಗೆ ಆಯೋಜಿಸಿದ ಸೈಕಲಿಂಗ್ ಚಾರಣದಲ್ಲಿ ಸಿಂಧು ಮಯ್ಯ ಅವರು ಪ್ರಪಂಚದ ಅತೀ ಎತ್ತರದ ರಸ್ತೆ ಹಿಮಾಲಯದ ಲೇಹ್ ನಿಂದ (ಎತ್ತರ 3000m) ಉಮಲಿಂಗ್ ಲಾ ವರೆಗೆ (ಎತ್ತರ 5000m) ಕೇವಲ 5 ದಿನಗಳಲ್ಲಿ 330 kms ದೂರವನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದ್ದಾರೆ. ಈ ಚಾರಣ ತಂಡದಲ್ಲಿ 4 ಪುರುಷರು ಹಾಗು 3 ಮಹಿಳೆಯರು ಭಾಗವಹಿಸಿದ್ದರು.

ಹಾಗಿದ್ದರೆ ಸಿಂಧು ಮಯ್ಯ ಅವರ ವಿಶೇಷತೆ ಏನಿದೆ?? ಅವರ ವಿಶೇಷತೆ ಅಂದರೆ 2022 ರಲ್ಲಿ ಪಾದದ ಆರ್ಥಿರಿಟಿಸ್ ನಿಂದ ಆದ ಆಪರೇಷನ್ ನಂತರ ನಡೆಯಲು ಕೂಡ ಅಸಾಧ್ಯವಾಗಿತ್ತು. ಒಂದು ವರ್ಷದವರೆಗೆ ಕೋಲಿನ ಆಸರೆ ಇಲ್ಲದೆ ನಡೆಯಲು ಸಾಧ್ಯವಿರಲಿಲ್ಲ. ಆದರೂ ಧೃತಿಗೆಡದೆ ಛಲದಿಂದ ಆತ್ಮ ವಿಶ್ವಾಸ ಇದ್ದರೆ ಏನು ಅಸಾಧ್ಯ ಇಲ್ಲಾ ಎಂದು ಸೈಕಲಿಂಗ್ ಚಾರಣದ ಮೂಲಕ ತಿಳಿಸಿದ್ದಾರೆ.


ಇನ್ನು ವಿಶೇಷ ಅಂದರೆ Child.org ಎಂಬ charity ಸಂಸ್ಥೆಯು ನವೆಂಬರ್ ಅಲ್ಲಿ ಕೀನ್ಯದ ಮಸಾಯ್ ಮಾರದಲ್ಲಿ ಆಯೋಜಿಸುತ್ತಿರುವ 5 ದಿನಗಳ 500 km ಸೈಕಲಿಂಗ್ ಚಾರಣದಲ್ಲಿ ಕೂಡ ಭಾಗವಹಿಸಲಿದ್ದಾರೆ.

ಇನ್ನು ವೈಯಕ್ತಿಕ ವಿಚಾರಕ್ಕೆ ಬಂದರೆ ವಿದ್ಯಾಭ್ಯಾಸದಲ್ಲೂ ಕೂಡ ಸದಾ ಮುಂದು. ಚಿತ್ರದುರ್ಗದಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ,2012 ರಲ್ಲಿ IIT ಚೆನ್ನೈ ಅಲ್ಲಿ ಇಂಜಿನಿಯರಿಂಗ್ ಮುಗಿಸಿದರು. ನಂತರ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ MSc ಮಾಡಿ ಅಮೇರಿಕಾ, ಐರ್ಲಾಡ್ ದೇಶಗಳಲ್ಲಿ ಕೆಲಸ ಮಾಡಿ ಪ್ರಸ್ತುತ ಜರ್ಮನಿಯ nubank ಎಂಬ ಡಿಜಿಟಲ್ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಸೀನಿಯರ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದಾರೆ.