Header Ads Widget

ಸಿಂಗಾಪುರದ ಮೃಗಾಲಯದಲ್ಲಿ ಒಂದು ಸುತ್ತು ~ಪೂರ್ಣಿಮಾ ಜನಾರ್ದನ್


ಸಿಂಗಾಪುರ: ಹೆಚ್ಚಿನ ಪ್ರವಾಸ ಪ್ರಿಯರ ಮೆಚ್ಚಿನ ದೇಶ ಸಿಂಗಾಪುರ. ಅಲ್ಲಿಗೆ ಪರ್ಯಟ ನೆಗೆ ಬರುವ  ಪ್ರವಾಸಿ ಗರಿಗೆ, ಅಲ್ಲಿರುವವರಿಗೆ ಆನಂದ ನೀಡುವ ತಾಣಗಳಲ್ಲಿ ಸಿಂಗಾಪುರ ಮೃಗಾಲಯ ಕೂಡಾ ಒಂದು. ಮಾಂಡೈ ಮೃಗಾಲಯ ಎಂದೂ ಕರೆಯಲ್ಪಡುವ ಈ ಮೃಗಾಲಯವು ಪ್ರಪಂಚದಲ್ಲಿ  ಅತ್ಯುತ್ತಮ ವಾದ ಮೃಗಾಲಯ ಗಳಲ್ಲಿ ಒಂದಾಗಿದ್ದು ಸುಮಾರು 26 ಹೆಕ್ಟೇರ್ ಪ್ರದೇಶಗಳ ವ್ಯಾಪ್ತಿ ಯಲ್ಲಿದೆ.

ಇಲ್ಲಿ 2500ಕ್ಕೂ ಅಧಿಕ ವಿವಿಧ ಪ್ರಾಣಿ ಪಕ್ಷಿಗಳಿದ್ದು  ಒಂದು ದಿನವಿಡೀ ಸುತ್ತಾಡಲು ಯೋಗ್ಯವಾಗಿದೆ ಹಾಗೂ ಪ್ರಾಣಿಗಳ ಕೂಡ ಚಮತ್ಕಾರದ ಆಟಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ. ಮಕ್ಕಳಿಗೆಂದೇ  ಆಟ ಗಳು, ಆಕರ್ಷಣೆಗಳು ಇಲ್ಲಿವೆ.  ಮಾಂಡೈ ವೈಲ್ಡ್ ಲೈಫ್ ರಿಸರ್ವ್, ವೈಲ್ಡ್ ಲೈಫ್ ಗ್ರೂಪ್ ಇದರ ಸುಪರ್ದಿಯಲ್ಲಿ ಬರುವ ಈ ಸಿಂಗಾಪುರ ಮೃಗಾಲಯ, ಅಲ್ಲಿನ  ನೈಟ್ ಸಫಾರಿ, ಜುರಾಂಗ್ ಬರ್ಡ್ ಪಾರ್ಕ್, ರಿವರ್ ವಂಡರ್ಸ್, ಇವೆಲ್ಲವೂ  ಪ್ರಸಿದ್ಧ ತಾಣಗಳು.  

ಸೀ ಲಯನ್ ನ ಸ್ಪ್ಲಾಶ್ ಸಫಾರಿ, ವಿಶೇಷ ಆಕರ್ಷಣೀಯ  ಚಮತ್ಕಾರಿ ಆಟಗಳು ಇಲ್ಲಿನ ಪ್ರಮುಖ ಆಕರ್ಷಣೆ. ನಾಯಿ ಬೆಕ್ಕುಗಳ ಒಡನಾಟ ಹಾಗು ಆಟಗಳ ಮೂಲಕ ಸಾಕು ಪ್ರಾಣಿಗಳನ್ನು  ಸ್ನೇಹಿತ ರನ್ನಾಗಿಸುವ ಪ್ರಯತ್ನ, ಜೀವ ಜಂತುಗಳನ್ನು ಉಳಿಸಲು ಪ್ಲಾಸ್ಟಿಕ್ ನಿಷೇಧದೊಂದಿಗೆ ಪರಿಸರ ಸಂರಕ್ಷಣೆಯ ಪಾಠ ಹೀಗೆ ಒಂದಷ್ಟು ಪ್ರಾಣಿ ಪ್ರಕೃತಿಯೊಂದಿಗೆ ಮನುಷ್ಯರ ಸಂಬಂಧದ ಕೊಂಡಿ ಬೆಳೆಸುವ ಶೋಗಳು ಇಲ್ಲಿ ಜನಪ್ರಿಯ. 

ವಿಶ್ವದ ಅಪರೂಪದ ಪ್ರಾಣಿ ಪ್ರಭೇದಗಳನ್ನು ನೋಡುವ ಅವಕಾಶದೊಂದಿಗೆ ಅವುಗಳ ಬಗ್ಗೆ ವಿವರಣೆಗಳನ್ನು ಹೊತ್ತ ಫಲಕಗಳು ಮಾತ್ರವಲ್ಲದೆ  ಅಲ್ಲಿನ ಸಿಬ್ಬಂದಿಗಳು ಅಲ್ಲಲ್ಲಿ ಮೃಗಾಲಯದ ವಿಶಿಷ್ಟ ಪ್ರಾಣಿಗಳ  ವಿಶೇಷತೆ ಯನ್ನು ವಿವರಿಸುವ ರೀತಿ, ಬಟರ್ ಫ್ಲ್ ಐವರಿ, ಅಪರೂಪದ ಪ್ರಾಣಿ ಪಕ್ಷಿಗಳು, ಆನೆಗಳ ಲಾಲನೆ ಪಾಲನೆ,  ಆರೋಗ್ಯ ಸಂರಕ್ಷಣೆ ಬಗ್ಗೆ ವಿವರಣಾತ್ಮಕ ಮಾಹಿತಿ ಹೊತ್ತ ದೃಶ್ಯಾವಳಿ ಗಳು, ಮೃಗಾಲಯದ  ಪ್ರಮುಖ ಸ್ಥಳ ಗಳನ್ನು ಸಂದರ್ಶಿಸಲು  ಪರಿಸರಕ್ಕೆ ಪೂರಕವಾದ  ಉಚಿತ ತೆರೆದ ವಾಹನ ವ್ಯವಸ್ಥೆ, ಉಪಹಾರ ಗೃಹಗಳು, ಸುತ್ತಾಡಿ ದಣಿವಾದಲ್ಲಿ ಕಾಲು ಚಾಚಿ ವಿಶ್ರಾಂತಿ ಪಡೆಯಲು ವಿಶಾಲ ಆಸನ ವ್ಯವಸ್ಥೆ ಇವೆಲ್ಲವೂ  ಮೃಗಾಲಯದ ಆಕರ್ಷಣೆ ಹೆಚ್ಚಿಸಿವೆ. 

ಸುಮಾರು ಐವತ್ತೊಂದು ವರುಷದ ಹಿಂದೆ 1973ರಲ್ಲಿ ಸಿಂಗಾಪುರ ಸರಕಾರ ಆರಂಭಿಸಿದ ಈ ಮೃಗಾಲಯಕ್ಕೆ ಟ್ರಿಪ್ ಅಡ್ವೈಸರ್ಸ್ 2017 ಟ್ರಾವೆಲರ್ಸ್‌‌ ಚ್ವಾಯ್ಸ್ ಅವಾರ್ಡ್ ಪ್ರಪಂಚದ ನಾಲ್ಕನೇ ಸ್ಥಾನ ನೀಡಿದ್ದು ಅಳಿವಿ ನಂಚಿನಲ್ಲಿರುವ ಹಲವಾರು ಪ್ರಾಣಿ ಪ್ರಭೇದಗಳನ್ನು ನಾವಿಲ್ಲಿ ಕಾಣಬಹು ದಾಗಿದೆ. ವರ್ಷಕ್ಕೆ ಸುಮಾರು ಎರಡು ಮಿಲಿಯನ್ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಿದ್ದು  ಸಿಂಗಾಪುರಕ್ಕೆ ಬಂದಾಗ  ಇಲ್ಲಿನ ಈ  ಒಂದು ಮೃಗಾಲಯ ನೋಡಲು ಮರೆಯದಿರಿ.
~ಪೂರ್ಣಿಮಾ ಜನಾರ್ದನ್