Header Ads Widget

ಸಿದ್ಧರಾಮಯ್ಯ ಅವರಿಗೆ ಜವಾಬ್ದಾರಿ ಮತ್ತು ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ.- ಶ್ರೀನಿಧಿ ಹೆಗ್ಡೆ.

 

ಸಂವಿದಾನ, ಕಾನೂನು, ನೈತಿಕತೆ, ಭ್ರಷ್ಟಚಾರದ ವಿರೋಧದ ಕುರಿತು ಮಾತನಾಡುವ ಸಿದ್ದ ರಾಮಯ್ಯ ಅವರು ಈ ಕ್ಷಣವೇ ರಾಜೀನಾಮೆ ನೀಡಬೇಕು.


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನು ಮತಿ ನೀಡಿರುವುದನ್ನು ಪ್ರಶ್ನಿಸಿ ಅರ್ಜಿಯನ್ನು ಕಿತ್ತೆಸೆಯುವ ಮೂಲಕ ಹೈಕೋರ್ಟ್ ಸಿದ್ಧ ರಾಮಯ್ಯ ಅವರ ವಿರುದ್ಧ ತನಿಖೆಗೆ ಹಸಿರು ನಿಶಾನೆ ನೀಡಿದೆ.


ಸಿದ್ಧರಾಮಯ್ಯ ಇನ್ನಾದರೂ ಅಧಿಕಾರದ ಆಸೆ ಯಿಂದ ರಾಜೀನಾಮೆ ನೀಡದೆ ತಮ್ಮ ಅತೀ ಭಂಡತನ ಪ್ರದರ್ಶನ ಮಾಡದೆ ರಾಜೀನಾಮೆ ನೀಡಿ ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳಲಿ.


ಸಿಎಂ ಸಿದ್ದರಾಮಯ್ಯ ರಾಜ್ಯಪಾಲರ ನೀಡಿದ್ದ ಪ್ರಾಸಿಕ್ಯೂಷನ್ ನೋಟೀಸ್ ಪ್ರತೀಕಾರವಾಗಿ ಕುಲಪತಿ ನೇಮಕ ವಿಚಾರವಾಗಿ ಸಹಿತ ಹಲವು ವಿಷಯಗಳಲ್ಲಿ ರಾಜ್ಯಪಾಲರ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕುಗ್ಗಿಸುವ ಪ್ರಯತ್ನ ಮಾಡಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು, 


ಭ್ರಷ್ಟಚಾರ ವಿರುದ್ಧ ಸ್ವಜನ ಪಕ್ಷಪಾತ ಕುರಿತು ಮಾತನಾಡುವ ಸಿದ್ದರಾಮಯ್ಯ ಅವರ ಮುಖ ವಾಡ ಇಂದು ಕಳಚಿ  ಬಿದ್ದಿದೆ ಎಂದು ಶ್ರೀನಿಧಿ ಹೆಗ್ಡೆ ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.