ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ 2020 ರ ಲಾಕ್ಡೌನ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ವಿವಿಧ ಗೋಶಾಲೆಗಳಲ್ಲಿರುವ ಅನಾಥ ಗೋವುಗಳಿಗೆ ಸಂಘ ಸಂಸ್ಥೆಗಳ ಮೂಲಕ ಮೇವು ನೀಡು ವ ಮೂಲಕ ಜಿಲ್ಲೆಯ ಯುವ ಸಮುದಾಯ ವನ್ನ ಗೋಸೇವೆಯತ್ತ ಕೊಂಡೊಯ್ದು ಜಿಲ್ಲೆಯಲ್ಲಿ 300 ಕ್ಕೂ ಸಂಘಸಂಸ್ಥೆಗಳ ಮೂಲಕ ಸಾವಿರಾರು ಕಾರ್ಯಕ್ರಮ ಅಯೋಜಿಸಿದ ಗೋವಿ ಗಾಗಿ ಮೇವು ಸಂಘಟನೆಯ ಕೋಟ ವಲ ಯಾದ್ಯಕ್ಷರಾಗಿ ಯುವ ಉದ್ಯಮಿ ಸುದಿನ ಕೋಡಿ ಆಯ್ಕೆ ಯಾಗಿದ್ದಾರೆ.
ಇವರು ತನ್ನ ಕಾಲೇಜು ದಿನಗಳಲ್ಲಿ ಸಂಘಟನಾಶೀಲರಾಗಿದ್ದು ವಿದ್ಯಾರ್ಥಿ ಸಂಘಟನೆ ಗಳಲ್ಲಿ ಸಕ್ರಿಯವಾಗಿದ್ದು ಪ್ರಸ್ತುತ ಲಕ್ಷ್ಮೀ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷರಾಗಿ, ಕೋಟ ಹಾಗೂ ಕೋಟದ ಕರಾವಳಿ ಭಾಗದ ಹಲವಾರು ಸಂಘಟನೆ ಗಳಲ್ಲಿ ತೊಡಗಿಸಿಕೊಂಡಿದ್ದು ಇವರು ಕೋಡಿಯಲ್ಲಿ ಆದುನಿಕ ಮೀನುಕ್ರಷಿ ಮೂಲಕ ನೂರಾರು ಮಹಿಳೆಯರು ಹಾಗೂ ಯುವಕರಿಗೆ ಮೀನು ಕ್ರಷಿಮಾಡಲು ಪ್ರೇರಣೆ ಯಾಗಿದ್ದಾರೆ.