Header Ads Widget

ಮಣೂರು ಸುರೇಶ್ ಹಂದೆ ನಿಧನ


ಮಣೂರು ಶಿಕ್ಷಕ ದಿ. ಶಂಕರನಾರಾಯಣ ಹಂದೆ ಅವರ ಪುತ್ರ ಸುರೇಶ್ ಹಂದೆ (68) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾಗಿದ್ದಾರೆ. 

ಇವರು ಬೆಂಗಳೂರಿನ ಗುರುನರಸಿಂಹ ಕಲ್ಯಾಣ ಮಂಟಪದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಶ್ರೀಯುತರು ಸಜ್ಜನರೂ ಸಹೃದಯಿಗಳೂ ಆಗಿದ್ದು ಕೊಡುಗೈ ದಾನಿಯಾಗಿದ್ದರು. ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ವಿದ್ಯಾಪೋಷಕರಾಗಿದ್ದರು,ಅನೇಕ ದೇವಾಲಯ ಗಳಿಗೆ, ಸಂಘ ಸಂಸ್ಥೆಗಳಿಗೆ ಆರ್ಥಿಕವಾಗಿ ಸಹಕಾರ ನೀಡುತ್ತಿದ್ದರು.

ಇವರು ಪತ್ನಿ ಸಹೋದರರು, ಸಹೋದರಿಯರನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.