Header Ads Widget

ತಿರುಪತಿ ಲಡ್ಡು ಪ್ರಸಾದ ವಿವಾದ~ ಶೀಘ್ರವೇ ದೇವಾಲಯದ ಶುದ್ದೀಕರಣ: ಆಂಧ್ರ ಸಿಎಂ

 



ತಿರುಪತಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಕಲಬರಕೆಯ ವಿಚಾರ ಇದೀಗ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ದೇವಸ್ಥಾನದ ಶುದ್ದೀಕರಣ ವಿಚಾರವಾಗಿ, ಈಗ ಆಗಿರುವ ಅಪಪ್ರಚಾರವನ್ನು ಹೇಗೆ ಸರಿ ಮಾಡಬೇಕು ಎಂದು ನಾವು ಮಠಾಧೀಶರು ಹಿಂದೂ ಧರ್ಮದ ಉನ್ನತ ಪಂಡಿತರೊಂದಿಗೆ ಸಮಾಲೋಚನೆ ಮಾಡುತ್ತೇವೆ. ಶುದ್ದೀಕರಣ ವಿಚಾರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ಇನ್ನು ಹಿಂದಿನ ಸಿಎಂ ಜಗಮ್ಮೋಹನ್ ರೆಡ್ಡಿ, ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬುಬಳಕೆ ಆರೋಪ ಸುಳ್ಳು ಎಂದಿದ್ದು ಈ ಬಗ್ಗೆ ಚಂದ್ರ ಬಾಬು,  ಜಗನ್ ಅವರ ಅವಧಿಯಲ್ಲಿ ರಾಜ್ಯದ ಅನೇಕ ದೇವಾಲಯಗಳು ಅಪವಿತ್ರ ಗೊಂಡಿವೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಪ್ರತಿ ಧರ್ಮಕ್ಕೂ ಅದರದೇ ಆದ ಪವಿತ್ರತೆಯಿದೆ. ನಮ್ಮ ಸರಕಾರ ಅದನ್ನು ಕಾಪಾಡಲಿದೆ ಎಂದು ಸ್ಪಷ್ಟಪಡಿಸಿದರು.