ಸಿಂಗಾಪುರ ದೇಶದ ಫರ್ನ್ ವೇಲ್ , ಸೆನ್ ಕಾಂಗ್ ನಲ್ಲಿರುವ ಥೈ ಹುವಾ ಕ್ವಾನ್ ದೇವಾಲಯವು 2019ರ ಮೇ 16 ರಂದು ಲಾಭ ರಹಿತ ಸ್ವಯಂ ಸೇವಾ ಕಲ್ಯಾಣ ಸಂಸ್ಥೆ(VWO) ಥೈ ಹುವಾ ಕ್ವಾನ್ ಮೋರಲ್ ಸೊಸೈಟಿಯಿಂದ ನಿರ್ಮಿತವಾದ ಬಹು ಧರ್ಮೀಯ ದೇವಾಲಯ.
ಇಲ್ಲಿ ಬೌದ್ಧ ,ತಾವೋ , ಕನ್ಫ್ಯೂಷಿಯಸ್ ದೇವತೆಗಳೊಂದಿಗೆ ಮೂರು ಸಾಲುಗಳಲ್ಲಿ ತಲಾ ಮೂವತ್ತಾರು ವಿಗ್ರಹಗಳಂತೆ ಒಟ್ಟು ನೂರ ಎಂಟು ಪುಟ್ಟ ಪುಟ್ಟ ದೇವತಾ ವಿಗ್ರ ಹಗಳು ಕಣ್ಮನ ಸೆಳೆಯುತ್ತವೆ.
ಇದರಲ್ಲಿ ಹಿಂದೂ ದೇವತೆಯನ್ನು ಹೋಲುವ ದ್ವಿ ದಶ ಭುಜ ದುರ್ಗಾಮಾತೆ ಹಾಗೂ ಬ್ರಹ್ಮ ದೇವರ ಪುಟ್ಟ ವಿಗ್ರಹಗಳನ್ನು ಕೂಡಾ ಕಾಣ ಬಹುದು. ವಿವಿಧ ಭಂಗಿಗಳಲ್ಲಿರುವ ಹೃದಯ ದಲ್ಲಿ ಸ್ವಸ್ತಿಕ ಚಿಹ್ನೆ ಹೊಂದಿದ ಬುದ್ಧನ ಮೂರ್ತಿ ಗಳು ಕೂಡ ಇಲ್ಲಿ ಇವೆ.
ಬಹುಧರ್ಮೀಯ ಸಂಭಾಷಣೆಗಳನ್ನು ಪ್ರೋತ್ಸಾಹಿಸುವ ಒಂದಷ್ಟು ಬರಹಗಳು ಗಣಕೀಕೃತ ಪರದೆಯಲ್ಲಿ ಆಗಾಗ ಪ್ರದರ್ಶಿಸಲ್ಪ ಡುತ್ತದೆ. ದೇವಾಲಯದ ಗೋಡೆಯ ಮೇಲೆ ಅನ್ಯ ಧರ್ಮೀಯರನ್ನು, ಅನ್ಯ ದೇಶೀಯ ರನ್ನು, ಅನ್ಯ ಭಾಷಿಗರನ್ನು, ಅನ್ಯ ವರ್ಣದ ವರನ್ನು ಗೌರವಿಸಿ ಎಂಬ ಬರಹಗಳು ಕಾಣ ಸಿಗುತ್ತವೆ.
ಅಲ್ಲದೇ ತಮಗಾಗಿ ಪ್ರಾರ್ಥಿಸಿ, ಕುಟುಂಬಕ್ಕಾಗಿ ಪ್ರಾರ್ಥಿಸಿ, ದೇಶಕ್ಕಾಗಿ ಪ್ರಾರ್ಥಿಸಿ, ಜಗತ್ತಿಗಾಗಿ ಪ್ರಾರ್ಥಿಸಿ ಎಂಬ ಕಂಪ್ಯೂಟರೀಕೃತ ಸಂದೇಶ ಗಳು ಮುಖಪರದೆಯಲ್ಲಿ ನಿರಂತರ ಪ್ರದರ್ಶಿ ಸಲ್ಪಡುತ್ತಿರುತ್ತದೆ.
ಚೀನೀ ವಾಸ್ತುಶಿಲ್ಪದ ಆಧಾರದ ಮೇಲೆ ಈ ದೇವಾಲಯದ ಕಟ್ಟಡ ವಿನ್ಯಾಸಗೊಂಡಿದ್ದು ಬಹು ಸಾಂಸ್ಕೃತಿಕ ಅನುಭವದ ವಾತಾವರಣ ಮನಕ್ಕೆ ಹಿತ ನೀಡುತ್ತದೆ.
ಆಧುನಿಕ ಸ್ಪರ್ಶವನ್ನು ಹೊಂದಿದ ಈ ದೇವಾಲಯದ ವಿಶಾಲ ಛಾವಣಿಯ ಮಧ್ಯ ದಲ್ಲಿ ಸಾಂಕೇತಿಕ ಕೆಂಪು ಚೀನೀ ಅಕ್ಷರವಿದ್ದು ಅದು ಹೃದಯವನ್ನು ಪ್ರತಿನಿಧಿಸುತ್ತದೆ.
ದೇವಾಲಯದ ಮುಂಭಾಗದಲ್ಲಿ ದೊಡ್ಡ ಅಗರಬತ್ತಿ ಹಾಗು ಚೆಂದದ ಪಿಂಗಾಣಿ ಪಾತ್ರೆ ಗಳಲ್ಲಿ ದೀಪಗಳು ಉರಿಯುತ್ತಲಿದ್ದು ಪ್ರಾಂಗ ಣದ ಸುತ್ತಲೂ ದೊಡ್ಡ ಲಿಂಬೆ ಗಾತ್ರದ ಕಿತ್ತಳೆ ಹಣ್ಣುಗಳನ್ನು ಹೊತ್ತ ಗಿಡಗಳು ಆಕರ್ಷಣೀ ಯವಾಗಿವೆ.
~ ಪೂರ್ಣಿಮಾ ಜನಾರ್ದನ್ ಕೊಡವೂರು