Header Ads Widget

ಯುಪಿಎಂಸಿ : ಸಿ ಎ- ಕೆರಿಯರ್ ಕೌನ್ಸೆಲಿಂಗ್ ಪ್ರೋಗ್ರಾಂ

 



ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಗಸ್ಟ್ 29 ರಂದು ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಉಡುಪಿ ಶಾಖೆಯ ವತಿಯಿಂದ ಸಿಎ ಎಫ್ ವೈ ಮತ್ತು ಸೂಪರ್ ಮೆಗಾ ಕೆರಿಯರ್ ಕೌನ್ಸೆಲಿಂಗ್ ಕಾರ್ಯಕ್ರಮವು ಜರಗಿತು. 

ಐಸಿಎಐ ಉಡುಪಿ ಶಾಖೆಯ ಉಪ ಮುಖ್ಯಸ್ಥೆ ಸಿಎ ಅರ್ಚನಾ ಆರ್ ಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. 

ಮುಖ್ಯ ಅಭ್ಯಾಗತರಾದ ಸಿಎ ಪ್ರದೀಪ್ ಜೋಗಿ ವಿದ್ಯಾರ್ಥಿಗಳಿಗೆ ಸಿಎ ಕೋರ್ಸ್ ನ ಬಗೆಗೆ ಮಾಹಿತಿ ನೀಡಿ ಸ್ವಂತ ಜೀವನಾನುಭವ ಹಂಚಿಕೊಂಡು ಕಾಲೇಜು ಹಂತದಲ್ಲಿ ಸಿಎ ಮಾಡಬೇಕು ಎಂಬ ಕನಸು ನೆರವೇರಿತು, ಅಂತೆಯೇ ಎಲ್ಲರೂ ಕನಸು ಈಡೇರುವ ತನಕ ಸತತ ಪ್ರಯತ್ನ ನಡೆಸಬೇಕು ಸಿ ಎ ಪರೀಕ್ಷೆ ತೆರ್ಗಡೆಯ ನಂತರದ ಉದ್ಯೋಗಾವಕಾಶಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್ ಉಪಸ್ಥಿತರಿದ್ದರು.