ದಿನಾಂಕ 17.08.2024 ರಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು ಉಡುಪಿ ಇಲ್ಲಿ ವಯೋನಿವೃತ್ತಿಗೊಂಡ ಹಾಗೂ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಯೋನಿವೃತ್ತಿ ಹೊಂದಿದ ಸಂಸ್ಕೃತ ಅಧ್ಯಾಪಕರಾದ ಶ್ರೀ ವೆಂಕಟರಮಣ ಉಪಾಧ್ಯ ಶಾಲಾ ಪರಿಚಾರಕರು ಶ್ರೀ ಉಮೇಶ್ ಹಾಗೂ ವರ್ಗಾವಣೆಗೊಂಡ ಶಿಕ್ಷಕಿ ಶ್ರೀಮತಿ ನಯನ ಮತ್ತು ಗೌರವ ಶಿಕ್ಷಕಿ ಕುಮಾರಿ ಸೌಮ್ಯ ಇವರನ್ನು ಗೌರವಿಸಿ ಸಮ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ ಸಮ್ಮಾನಿತರ ಸೇವೆಯನ್ನುಶ್ಲಾಘಿಸಿದರು.
ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಕುಸುಮ, ಎಸ್.ಡಿ.ಎಂ.ಸಿ ZP ಶಿಕ್ಷಣ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮ್ಮಾನಿತರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಸ್ವಾಗತಿಸಿದರು,ಸಹಶಿಕ್ಷಕಿ ತಾರಾಮತಿ ಹಾಗೂ ವಿದ್ಯಾರ್ಥಿನಿ ಸನ್ನಿಧಿ ನಿರೂಪಿಸಿ ಸಹಶಿಕ್ಷಕಿ ಶ್ರೀಮತಿ ಉಷಾ ಧನ್ಯವಾದ ಸಮರ್ಪಿಸಿದರು.