Header Ads Widget

ಬೃಹತ್ ರಕ್ತದಾನ ಶಿಬಿರ

 

ಉಡುಪಿ ಸೆ.22: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಮಾರ್ಪಳ್ಳಿ, ಕುಕ್ಕಿಕಟ್ಟಿ ಇದರ 40ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ, ಮಾರ್ಪಳ್ಳಿ ಗೆಳೆಯರ ಬಳಗ, ಮಹಿಳಾ ಮಂಡಳಿ, ಆಟೋ ಮತ್ತು ಟೆಂಪೋ ಚಾಲಕರು ಮತ್ತು ಮಾಲಕರು ಕುಕ್ಕಿಕಟ್ಟೆ, ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಭಂಡಾರಿ ಪವರ್ ಲೈನ್ಸ್ ಪ್ರೈವೇಟ್ ಲಿ. ಮಣಿಪಾಲ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಶ್ರೀಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸರ್ಜನ್ ಎಚ್ ಅಶೋಕ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉಡುಪಿಗೆ ಸ್ಥಳೀಯ ಅಥವಾ ಜಿಲ್ಲೆಯ ರೋಗಿಗಳು ಮಾತ್ರವಲ್ಲದೆ ಗೋವಾ ಹಾಗೂ ಇತರ ಕಡೆಗಳಿಂದಲೂ ರೋಗಿಗಳು ಬರುತ್ತಾರೆ. ಆದ್ದರಿಂದ ಉಡುಪಿಯ ರಕ್ತ ಕೇವಲ ಉಡುಪಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಸ್ತುತ. ಪಾಸಿಟಿವ್ ರಕ್ತಕ್ಕಿಂದ ನೆಗೆಟಿವ್ ಗ್ರೂಪ್‌ನ ರಕ್ತದ ಕೊರತೆ ತುಂಬಾ ಇದೆ. 

ಒಬ್ಬರ ರಕ್ತ 5 ಜನರಿಗೆ ಜೀವದಾನ ನೀಡಬಲ್ಲದು. ರಕ್ತದ ಅವಶ್ಯಕತೆ ಅಂತ ಬಂದಾಗ ನಾವು ಖಾಸಗಿ ಆಸ್ಪತ್ರೆ ಅಥವಾ ಸರಕಾರಿ ಆಸ್ಪತ್ರೆ ಎಂದು ನೋಡೋಕಾಗಲ್ಲ ಎಲ್ಲರಿಗೂ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರಿ ಪವರ್ ಲೈನ್ಸ್‌ ಮಣಿಪಾಲ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜ್ಞಾನನಂದ ಐರೋಡಿ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಕುಂದಾಪುರದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸಭಾಪತಿ ಜಯಕರ ಶೆಟ್ಟಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಮಣಿಪಾಲ ಇದರ ಅಧ್ಯಕ್ಷ ಸತೀಶ್ ಸಾಲಿಯನ್ ಮಣಿಪಾಲ, ಗೆಳೆಯರ ಬಳಗ ಮಾರ್ಪಳ್ಳಿ ಇದರ ಅಧ್ಯಕ್ಷ ವಿಜಯ್ ಆರ್ ನಾಯಕ್, ಮಾರ್ಪಳ್ಳಿಯ ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪಲತಾ ರಮಾನಂದ, ಕುಕ್ಕಿಕಟ್ಟೆಯ ಆಟೋ ಮತ್ತು ಟೆಂಪೋ ಚಾಲಕರು ಇದರ ಕರುಣಾಕರ ಶೆಟ್ಟಿಗಾರ್,  ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಇದರ ಗುರು ಸ್ವಾಮಿ ವಸಂತ್ ಶೆಟ್ಟಿಗಾರ್ ಮಾರ್ಪಳ್ಳಿ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಮಾರ್ತಳ್ಳಿ ಇದರ ಅಧ್ಯಕ್ಷ ಜಯಂತ್ ನಾಯಕ್ ಮಂಚಿ, ಶಿವರಾಂ, ಸಂದೀಪ್ ಕುಲಾಲ್, ಅನುರಾಧ ಅವರು ಉಪಸ್ಥಿತರಿದ್ದರು.