ರಾಗ ಧನ ಉಡುಪಿ ಸಂಸ್ಥೆಯು, ಪ್ರಸ್ತುತಪಡಿಸುವ ಸರಣಿ ಸಂಗೀತ ಕಾರ್ಯಕ್ರಮ 'ರಾಗರತ್ನ ಮಾಲಿಕೆ- 28' ದಿನಾಂಕ 14.9.2024, ಶನಿವಾರದಂದು ಸಂಜೆ 4:45ರಿಂದ ಮಣಿಪಾಲ ಡಾಟ್ ನೆಟ್ ಅಲೆವೂರು ರಸ್ತೆ ಮಣಿಪಾಲದಲ್ಲಿ ನಡೆಯಲಿದೆ.
ಚೆನ್ನೈನ ಡಾ.ಬಿ.ವಿಜಯ ಗೋಪಾಲ್ ಅವರ ಕೊಳಲು ಹಾಗೂ ವಿದ್ವಾನ್ ಗಣೇಶ್ ಚೆನ್ನೈ ಅವರ ಚಿತ್ರ ವೀಣಾ ಕಛೇರಿ ನಡೆಯಲಿದೆ. ಮೃದಂಗದಲ್ಲಿ ಶ್ರೀ ನಿಕ್ಷಿತ್ ಪುತ್ತೂರು ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.