Header Ads Widget

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ : ಭಜನಾ ಮಂಡಳಿಗಳಿಂದ 'ಸಾಧಕ ಪ್ರಶಸ್ತಿ'ಗೆ ಅರ್ಜಿ ಆಹ್ವಾನ


ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತೀ ವರ್ಷದಂತೆ ಈ ಬಾರಿ ಸೆ.22ರಿಂದ 29ರ ವರೆಗೆ 'ರಾಜ್ಯ ಮಟ್ಟದ ಭಜನಾ ಕಮ್ಮಟ' ನಡೆಯಲಿದೆ. ಸೆ.29ರಂದು ನಡೆಯಲಿರುವ 'ಭಜನೋತ್ಸವ' ಹಾಗೂ 'ಭಜನಾ ಕಮ್ಮಟದ ಸಮಾರೋಪ' ಸಮಾರಂಭದಲ್ಲಿ ತಾಲೂಕಿನ ಆಯ್ದ ಒಂದು ಉತ್ತಮ ಭಜನಾ ಮಂಡಳಿಗೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಿಂದ 'ಸಾಧಕ ಪ್ರಶಸ್ತಿ'ಯನ್ನು ಸ್ವೀಕರಿಸುವ ಸದವಕಾಶವಿದೆ.

ಈ ನಿಟ್ಟಿನಲ್ಲಿ ಉಡುಪಿ ತಾಲೂಕಿನ ಆಸಕ್ತ ಭಜನಾ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ನಿಗದಿತ ನಮೂನೆಯಲ್ಲಿ ತಮ್ಮ ಭಜನಾ ಮಂಡಳಿಯ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸೆ.14ರ ಸಂಜೆಯೊಳಗೆ ತಲುಪುವಂತೆ ಭಜನಾ ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಅಥವಾ ವಲಯಗಳ ಸಂಯೋಜಕರು/ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿಗಳು/ವಲಯ ಮೇಲ್ವಿಚಾರಕರಲ್ಲಿ ನೀಡಬೇಕಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.