ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ
ಮದರ್ ಇಂಡಿಯಾ ಫ್ರೀ ನೈಟ್ ಹೈ ಸ್ಕೂಲ್ ಮುಂಬೈ ಇವರ ಐದನೇ ವರ್ಷದ ಗುರು ವಂದನೆ ಮತ್ತು ತವರೂರು ಕಾಣಿಕೆ ಕಾರ್ಯ ಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾನ್ಯ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಬಾಂಬೆ ಸ್ಕೌಟ್ ಬಳಗದವರ ಒಗ್ಗಟ್ಟು, ಸೇವಾ ಮನೋಭಾವನೆ ಸಹೋದರತ್ವ ಕಂಡು ಸಂತಸ ಪಟ್ಟು, ಈ ನಿಮ್ಮ ಬೆಳವಣಿಗೆ ಹಾಗೂ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಆನಂದ್ ಅಡಿಗ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್ ಉಪಸ್ಥಿತರಿದ್ದರು.