ಬೆಂಗಳೂರು : ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿದ್ದ ಜಮೀನು ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡು ವಂತೆ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆ ಯುತ್ತಿದ್ದಾರೆ.
ಈ ಸಂಬಂಧ ರಾಜ್ಯಪಾಲರು ಪದೇ ಪದೆ ಸರ್ಕಾರಕ್ಕೆ ಪತ್ರ ಬರೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿ ಗೃಹ ಇಲಾಖೆ ಸಚಿವ ಡಾ.ಪರ ಮೇಶ್ವರ್ ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿ ನಿತ್ಯ ಸರ್ಕಾರದ ಕಾರ್ಯದ ಬಗ್ಗೆ ರಾಜ್ಯ ಪಾಲರು ಮಾಹಿತಿ ಕೇಳಿದ್ದ ಸಂದರ್ಭಗಳೇ ಇಲ್ಲ
.ಆದರೆ ಪ್ರತಿ ದಿನ ಪತ್ರ ಬರೆದು ಪತ್ರದ ಮೂಲಕ ಮಾಹಿತಿ ಕೊಡಿ ಅಂತಿದ್ದಾರೆ. ರಾಜ್ಯ ಪಾಲರು ಹಾಗೂ ಸರ್ಕಾರದ ಮಧ್ಯೆ ಗುಡ್ ರಿಲೇಷನ್ಶಿಪ್ ಇರುತ್ತೆ. ಆದರೆ ಹೀಗಾದರೆ ಸ್ಮೂತ್ ಆಗಿ ಆಗೋದಿಲ್ಲ.
ಮುಂದೆ ಏನು ಮಾಡಬೇಕೆಂದು ಸಿಎಂ ಜತೆ ಚರ್ಚೆ ಮಾಡುತ್ತೇವೆ. ಅನಿವಾರ್ಯತೆ ಇಲ್ಲ ದಿದ್ದರೆ ರಾಜ್ಯಪಾಲರಿಗೆ ಉತ್ತರ ಕೊಡುವುದಿಲ್ಲ. ಯಾವುದಕ್ಕೆ ಉತ್ತರ ಕೊಡಬೇಕೋ ಕೊಡು ತ್ತೇವೆ. ಸಂಪುಟದಲ್ಲಿ ರಾಜ್ಯಪಾಲರ ನಡವಳಿಕೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬೆಂಗಳೂರಿ ನಲ್ಲಿ ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ಅವರು ರಾಜ್ಯಪಾಲರ ನಡೆಗೆ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯಪಾಲರ ಹುದ್ದೆ ಅತ್ಯಂತ ಜವಾಬ್ದಾರಿ ಯುತ ಸ್ಥಾನ. ಸಂವಿಧಾನ ರಕ್ಷಣೆ ಮಾಡುವ ಸ್ಥಾನ ಕೊಟ್ಟಿದ್ದಾರೆ. ಸಂವಿಧಾನ ಯಾವ ರೀತಿ ರಕ್ಷಣೆ ಮಾಡಬೇಕು ಅಂತ ಅಧಿಕಾರ ಕೊಟ್ಟಿ ದ್ದಾರೆ. ಪ್ರಥಮಬಾರಿಗೆ ಈ ರೀತಿ ಯಾಗಿದೆ. ಪ್ರತಿ ನಿತ್ಯ ಆಡಳಿತದಲ್ಲಿ ಸರ್ಕಾರದ ಕಾರ್ಯದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ್ದ ಸಂದರ್ಭಗಳೇ ಇಲ್ಲ.
ಇತಿಹಾಸದಲ್ಲಿ ಕರ್ನಾಟಕದಲ್ಲಿ ಕೇಳಿಲ್ಲ. ಇಲ್ಲಿ ಯವರೆಗೆ ಅನೇಕ ಗೌರ್ನರ್ಗಳು ಬಂದಿದ್ದಾರೆ. ಆದರೆ ದಿನ ನಿತ್ಯ ಪತ್ರ ಬರೆದು ಪತ್ರದ ಮೂಲಕ ಮಾಹಿತಿ ಕೊಡಿ ಅಂತಿದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಎಂ, ಕಾನೂನು ಸುವ್ಯವಸ್ಥೆ ವಿಚಾರ ಬಂದರೆ ಗೃಹ ಸಚಿವರು ರಾಜ್ಯಪಾಲ ರಿಗೆ ಮಾಹಿತಿ ನೀಡುತ್ತಿದ್ದರು.
ಅವರಿಗೆ ಸಚಿವ ರನ್ನ ಕರೆದು ಮಾಹಿತಿ ಪಡೆಯುವ ಹಕ್ಕು ಇದೆ. ಸರ್ಕಾರದಲ್ಲಿ ಸಿಎಂ ಜೊತೆಗೆ ಇದರ ಬಗ್ಗೆ ಚರ್ಚೆ ಮಾಡ್ತೇವೆ. ದಿನ ಪತ್ರ ಬರೆದು ಮಾಹಿತಿ ಕೇಳೋದು ಸಂವಿಧಾನ ವಿರೋಧವಾಗಿದೆ.
ಈ ಸಂಬಂಧ ಸಿಎಂ ಜೊತೆ ಚರ್ಚೆ ಮಾಡು ತ್ತೇವೆ. ಅನಿವಾರ್ಯತೆ ಇಲ್ಲದಿದ್ದರೆ ನಾವು ರಾಜ್ಯಪಾಲರಿಗೆ ಉತ್ತರ ಕೊಡಲ್ಲ. ಯಾವುದಕ್ಕೆ ಉತ್ತರ ಕೊಡಬೇಕೋ ಕೊಡುತ್ತೇವೆ. ಎಲ್ಲರಿಗೂ ಒಂದೇ ಮಾನದಂಡ.
ಸಿದ್ದರಾಮಯ್ಯಗೆ ಒಂದು ಮಾನದಂಡ, ಕುಮಾರಸ್ವಾಮಿಗೆ ಒಂದು ಮಾನದಂಡ ಆಗಲ್ಲ. ನಾಲ್ಕೂ ಜನ ಮಂತ್ರಿ ಮಾಜಿ ಸಿಎಂಗಳ ದೂರಿಗೆ ರಾಜ್ಯಪಾಲರು ನೋಟಿಸ್ ಅನ್ನೇ ನೀಡಿಲ್ಲ ಎಂದರು.