ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿ ಇವರ ಆಶ್ರಯದಲ್ಲಿ ವೈದ್ಯಾಧಿಕಾರಿಗಳ ಕುಟುಂಬ ಮಿಲನ "ಮಿಂಗ್ಲಿ ಮ್ಯಾಜಿಕ್ ಕಾರ್ಯಕ್ರಮ ಉಡುಪಿ ಅಜ್ಜರ ಕಾಡು ಪುರಭವನದಲ್ಲಿ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಅಸೋಸಿಯೇಷನ್‌ನ ಸದಸ್ಯರ ಕುಟುಂಬದವರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಂತರ ನಡೆದ ಸಾಂಸ್ಕೃ ತಿಕ ಕಾರ್ಯಕ್ರಮದಲ್ಲಿ ಮಧುರ ಲಹರಿ ಅವರಿಂದ ಸಂಗೀತ, ಹಿರಿಯ, ಕಿರಿಯ ಮತ್ತು ಮಹಿಳಾ ಸದಸ್ಯರಿಂದ ನೃತ್ಯ, ನಾಟಕ, ಭವ್ಯ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ರೂಪಕ ಇನ್ನಿತರ ಕಾರ್ಯಕ್ರಮಗಳು ನಡೆದವು.
ಹಿರಿಯ ವೈದ್ಯರಾದ ಡಾ.ವೈ.ಎಸ್.ರಾವ್ ಮತ್ತು ಡಾ.ಉಮೇಶ್ ಪ್ರಭು, ಡಾ. ರವೀಂದ್ರನಾಥ್ ಅಸೋಸಿಯೇಷನ್‌ನ ಅಧ್ಯಕ್ಷೆ ಡಾ.ರಾಜಲಕ್ಷ್ಮೀ, ಕಾರ್ಯದರ್ಶಿ ಡಾ.ಅರ್ಚನಾ ಭಕ್ತ, ಕೋಶಾದಿ ಕಾರಿ ಡಾ.ಆಮ್ನಾ ಹೆಗ್ಡೆ ಸಂಘದ ಪೂರ್ವಾ ಧ್ಯಕ್ಷರುಗಳು, ಸದಸ್ಯರುಗಳು ಮತ್ತು ಕುಟುಂ ಬಸ್ಥರು ಉಪಸ್ಥಿತರಿದ್ದರು. ಡಾ.ರಾಜೇಶ್ ಭಕ್ತ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವ ಹಸಿದರು.
ಪೂರ್ವಿಕಲ್ಯಾಣಿ ಪ್ರಾರ್ಥಿಸಿ, ಡಾ.ರಾಜಲಕ್ಷ್ಮೀ ಸ್ವಾಗತಿಸಿ, ಕೋಶಾಕಾರಿ ಡಾ.ಆಮ್ನಾ ಹೆಗ್ಡೆ ಮತ್ತು ಡಾ.ಮೇಘಾ ಪೈ ಕಾರ್ಯಕ್ರಮ ನಿರೂಪಿಸಿ, ಡಾ.ಅರ್ಚನಾ ಭಕ್ತ ವಂದಿಸಿದರು.