Header Ads Widget

ಮುಡಾ ಹಗರಣದಲ್ಲಿ ಸಿಎಂಗೆ FIR ದಾಖಲಿಸಿ ತನಿಖೆ ನಡೆಸಲು ಜನಪ್ರತಿನಿಧಿಗಳ ಕೋರ್ಟ್ ಆದೇಶ

ಬೆಂಗಳೂರು : (ಸೆ.25): ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಸುಮಾರು 56 ಕೋಟಿ ರು. ಮೌಲ್ಯದ 14 ಬದಲಿ ನಿವೇಶನಗಳನ್ನು ಪಡೆದಿರುವ ಪ್ರಕರಣಕ್ಕೆ ಸಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮೋದನೆಯನ್ನು ಹೈ ಕೋರ್ಟ್ ಎತ್ತಿಹಿಡಿಯಿತು.


ಹೀಗಾಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆಗೆ ಇದ್ದ ತಡೆ ವಜಾಗೊಂಡಿತು. ಇಂದು ವಿಚಾರಣೆ ನಡೆಸಿದ ಕೋರ್ಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಯುಕ್ತಾ ಪೊಲೀಸರು 6 ವಾರಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ.


ಇದೀಗ ಇದೇ ಕೇಸ್‌ ಗೆ ಸಂಬಂಧಿಸಿದಂತೆ ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನೀಡಿರುವ ಖಾಸಗಿ ದೂರು ವಿಚಾರಣೆ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ನಡೆದಿದೆ. ಈ ಇಡೀ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವೇನು? ಹೀಗಾಗಿ ಈ ಕೇಸ್‌ ವಿರುದ್ಧ ಸಂಪೂರ್ಣ ತನಿಖೆ ಅಗತ್ಯವಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಪಿಸಿ ಆಕ್ಟ್ 7ಸಿ ಅಡಿ ತನಿಖೆ ಅಗತ್ಯತೆ ಪ್ರಸ್ತುತ ಪ್ರಕರಣದಲ್ಲಿ ಕಾಣುತ್ತಿದೆ. ತನಿಖೆಗೆ ಮುಖ್ಯ ಮಂತ್ರಿಗಳು ಹಿಂಜರಿಯಬಾರದು. 


ಬಿಎನ್‌ಎಸ್ ಎಸ್ ಅಡಿ ಪ್ರಕರಣ ದಾಖಲು ಮಾಡಬಹುದು ಎಂಬ ಬಗ್ಗೆ ಕೆಲ ಹೈಕೋರ್ಟ್ ಗಳ ಆದೇಶಗಳನ್ನ ಸ್ನೇಹಮಯಿ ಕೃಷ್ಣ ಅವರ ಪರ ವಕೀಲೆ ಲಕ್ಷ್ಮಿ ಅಯ್ಯಂಗಾರ್ ಜನಪ್ರತಿನಿಧಿಗಳ ಕೋರ್ಟ್ ಗೆ ಸಲ್ಲಿಸಿದರು. ಬಿಎನ್‌ಎಸ್‌ಎಸ್ 175(3) ಆದೇಶ ಮಾಡುವಂತೆ ವಕೀಲರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆದೇಶ ಮಾಡುವುದಾಗಿ ತಿಳಿಸಿದ ಜಡ್ಜ್ ಸಂತೋಷ್ ಗಜಾನನ ಭಟ್ ಸೆ.24ರಂದು ಹೈಕೋರ್ಟ್ ನೀಡಿದ್ದ ಆದೇಶ ಪರಿಗಣಿಸಿ ಖಾಸಗಿ ದೂರಿನ ಹಿನ್ನೆಲೆ ಆದೇಶ ನೀಡಿದ್ದಾರೆ.


ಯಾವ ಯಾವ ಅಂಶಗಳ ಬಗ್ಗೆ ತನಿಖೆ ಅಗತ್ಯವಿದೆ. ಬಿಎನ್‌ಎಸ್ ಕಾಯ್ದೆ ಜಾರಿಗೂ ಮುನ್ನ ಅರೋಪಿತ ಕೃತ್ಯಗಳು ನಡೆದಿವೆ ಎಂದು ಉಲ್ಲೇಖಿಸಿ ಬಿಎನ್‌ಎಸ್ ಹಾಗೂ ಸಿಆರ್ಪಿಸಿ ಬಗ್ಗೆ ತಿಳಿಸಿ, ಯಾವ ಕಾನೂನಿನ ಪ್ರಕ್ರಿಯೆ ಪಾಲಿಸಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ವಿಸ್ತೃತವಾದ ಆದೇಶ ಬರೆಸಿದ್ದಾರೆ.


ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರದ ಬಗ್ಗೆ ಉಲ್ಲೇಖಿಸಿರುವ ನ್ಯಾಯಮುರ್ತಿಗಳು ಮುಡಾ ನಿವೇಶನ ಹಂಚಿಕೆಯಾದ ಬಳಿಕವೂ ಖರೀದಿ ಮಾಡಲಾಗಿದೆ. ಸಿಎಂ ಭಾಮೈಧ ಜಮೀನು ಖರೀದಿ ಬಗ್ಗೆ ಉಲ್ಲೇಖವಿದೆ. ಜಮೀನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲಾಗಿತ್ತು. ಪರಿಹಾರ ನಿಗದಿಯಾದ ಬಳಿಕವೂ ಡಿನೋಟಿಫಿಕೇಷನ್ ಆಗಿದೆ. ದೇವರಾಜು ಹೆಸರಿಗೆ ಜಮೀನಿನ ನಕಲಿ ಡಿನೋಟಿಫೀಕೇಷನ್ ಆಗಿದೆ. ಹೀಗಾಗಿ ತನಿಖೆಯ ಅಗತ್ಯ ಕಾಣುತ್ತಿದೆ. 


ಪಿಸಿ ಆಕ್ಟ್ 7ಸಿ ಅಡಿ ತನಿಖೆ ಅಗತ್ಯತೆ ಇದೆ. ದೇವರಾಜು ಮಾಲೀಕನಲ್ಲದಿದ್ದರೂ ಆತನಿಂದ ಜಮೀನು ಖರೀದಿ ಮಾಡಲಾಗಿದೆ. ರಾಜ್ಯಪಾಲರ ಅನುಮತಿ ಬಳಿಕವೂ ಅದನ್ನ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿತ್ತು. ಹೈಕೋರ್ಟ್ ಸಿಎಂ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿದೆ ಈ ಎಲ್ಲಾ ಪ್ರತಿಯನ್ನು ಕೋರ್ಟ್ ಗೆ ದೂರುದಾರರು ಸಲ್ಲಿಸಿದ್ದಾರೆ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.