ದಿನಾಂಕ : 30/09/2024ರಂದು ಸುಮಾರು 15.50 ರಿಂದ 16 ಗಂಟೆಯ ಸಮಯದಲ್ಲಿ ಒಂದು ಇಚರ್ ಲಾರಿ KA41D0227 ಬಜ ಗೋಳಿ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಿಸುತ್ತಿದ್ದು, ವೇಣೂರು ಕಡೆಯಿಂದ KA21R5236 ಡಿಸ್ಕವರಿ ಮೋಟಾರು ಸೈಕಲ್ ಮೂಲಕ ನಲ್ಲೂರಿಗೆ ತೆರಳುತ್ತಿದ್ದು, ಇದನ್ನು ಸುರೇಶ್ ಆಚಾರ್ಯ(35) ಇವರು ಚಲಾಯಿಸು ತ್ತಿದ್ದರು.
ಬೈಕ್ಅ ನಲ್ಲಿ ಅವರ ಪತ್ನಿ ಮೀನಾಕ್ಷಿ(32), ಸುಮೀಕ್ಷಾ(7), ಸುಶ್ಮಿತಾ(5) ಸುಶಾಂತ್(2 ) ಇವರನ್ನು ಕುಳ್ಳಿರಿಸಿಕೊಂಡು ಹೋಗುವಾಗ ಪಾಜೆಗುಡ್ಡೆ ತಿರುವಿನಲ್ಲಿ ಇಚರ್ ಲಾರಿಯ ಚಾಲಕ ಅತೀ ವೇಗ ಹಾಗೂ ಅಜಾರೂಕತೆ ಯಿಂದ ಚಾಲನೆ ಮಾಡಿಕೊಂಡು ಬಂದು ಸದರಿ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿ ಣಾಮ ಚಾಲಕರಾದ ಸುರೇಶ, ಸುಮೀಕ್ಷಾ, ಸುಶಾಂತ್ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.