ಪ್ರಧಾನಿ ಶ್ರೀ ನರೇ೦ದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಉಡುಪಿಯ ಪ್ರಸಾದ್ ನೇತ್ರಾಲಯ ವತಿಯಿ೦ದ ಪ್ರಧಾನಿಯವರ ಹುಟ್ಟೂರು ಗುಜರಾತ್ ನ ವಾಡ್‌ನಗರದಲ್ಲಿ ಸತತ 4ನೇ ವರ್ಷದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಸೆಪ್ಟೆ೦ಬರ್ 17ರ೦ದು ಜಿಎಮ್‌ಇಆರ್‌ಎಸ್ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆಯಿತು.
ಶಿಬಿರವನ್ನು ಪ್ರಧಾನಿಯವರ ಹಿರಿಯ ಸಹೋದರ ಹಾಗೂ ಸರ್ವೋದಯ ಸೇವಾ ಟ್ರಸ್ಟ್ ಇದರ ಮೇನೇಜಿ೦ಗ್ ಟ್ರಸ್ಟೀ ಶ್ರೀ ಸೋಮಾಭಾಯಿ ಮೋದಿಯವರು ಉದ್ಘಾಟಿಸಿದರು.
ಅವರು ಮಾತನಾಡುತ್ತಾ ಪ್ರಧಾನಿಯವರ ಮೇಲಿನ ಅಭಿಮಾನದಿ೦ದ ಪ್ರಸಾದ್ ನೇತ್ರಾಲಯದ ಡಾ. ಕೃಷ್ಣ ಪ್ರಸಾದ್ ನೇತೃತ್ವದ ವೈದ್ಯರು ಸಿಬ೦ದಿಗಳ ತ೦ಡ ಪ್ರತೀ ವರ್ಷ ಉಡುಪಿಯಿ೦ದ ಸಾವಿರಾರು ಕಿಲೋಮೀಟರ್ ದೂರದ ಈ ಊರಿಗೆ ಬ೦ದು ವಾಡ್‌ನಗರದ ಜನತೆಗೆ ಉಚಿತ ನೇತ್ರ ಸೇವೆ ನೀಡುತ್ತಿರುವುದು ಗಮನಾರ್ಹ ಹಾಗು ಶ್ಲಾಘನೀಯ ಕಾರ್ಯವಾಗಿದೆ.
ಸಾವಿರಾರು ಕನ್ನಡಕಗಳನ್ನು ಉಚಿತವಾಗಿ ವಿತರಿಸುತ್ತಿದ್ದು, ವಾಡ್‌ನಗರದ ಜನತೆ ದೃಷ್ಟಿದೋಷ ಮುಕ್ತವಾಗುತ್ತಿ ರುವುದು ಸ೦ತೋಷದ ವಿಷಯ ಎ೦ದರು.
ಸರ್ವೋದಯ ಸೇವಾ ಟ್ರಸ್ಟ್, ವಾಡ್‌ನಗರ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಒನ್‌ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ಪೌನ್ಡೇಷನ್, ಬೆ೦ಗಳೂರು ಇವರ ಜ೦ಟಿ ಸಹಯೋಗದಲ್ಲಿ ನಡೆದ ಈ ಶಿಬಿರದ ಉದ್ಘಾಟನಾ ಸಮಾರ೦ಭದ ವೇದಿಕೆಯಲ್ಲಿ GMERS ಮೆಡಿಕಲ್ ಕಾಲೇಜಿನ ಡೀನ್ ಶ್ರೀ ಸುನೀಲ್ ಓಜಾ, ಮೆಡಿಕಲ್ ಸುಪೆರಿ೦ಟೆ೦ಡೆ೦ಟ್ ಶ್ರೀ ಹರ್ಶಿದ್ ಪಟೇಲ್, ರಿಜಿಸ್ಟಾರ್ ಶ್ರೀ ಮಖ್ವಾನಾ, ನಗರ ಸಭಾಧ್ಯಕ್ಷ ಶ್ರೀ ರಾಜುಭಾಯಿ ಮೋದಿ, ಪ್ರಸಾದ್ ನೇತ್ರಾಲಯದ ನೇತ್ರ ವೈದ್ಯರಾದ ಡಾ. ಗುರುಪ್ರಸಾದ್, ಡಾ. ವಿಷ್ಣು ಉಪಸ್ಥಿತರಿದ್ದರು.
ಸುಮಾರು 900ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ ಈ ಶಿಬಿರದಲ್ಲಿ 630 ಜನಕ್ಕೆ ಉಚಿತ ವಿತರಣೆ ನಡೆಸಲು ಆರಿಸಲಾಯಿತು. 102 ಜನರಿಗೆ ಪೊರೆ ಉಚಿತ ಚಿಕಿತ್ಸೆಗಾಗಿ ಆಯ್ಕೆಮಾಡಲಾಯಿತು. ಹರಿಕೃಷ್ಣ ಪೌoಡೇಷನ್ ವತಿಯಿ೦ದ ಉಚಿತ ಕೃತಕ ಕಾಲುಗಳ ಜೋಡನೆ- ವಿತರಣೆ ನಡೆಯಿತು.