ಗ್ರಾಮ ಪಂಚಾಯತ್ ಉಪ್ಪೂರು, ಪಶು ಆಸ್ಪತ್ರೆ ಬ್ರಹ್ಮಾವರ, ಪ್ರಾಥಮಿಕ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರ ಕೊಳಲಗಿರಿ, ವಿಚಾರ ವೇದಿಕೆ ಕೊಳಲಗಿರಿ, ಯುವಜನ ಮಂಡಲ ಉಪ್ಪೂರು, ಜನತಾ ವ್ಯಾಯಮ ಶಾಲೆ ಜಾತಾಬೆಟ್ಟು, ಗೆಳೆಯರ ಬಳಗ ಲಕ್ಷ್ಮಿನಗರ, ಸವಿನಯ ಪ್ರೆಂಡ್ಸ್ ಕ್ಲಬ್ ನರ್ನಾಡು, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘ, ವಿಶ್ವಾಸ್ ಪ್ರೆಂಡ್ಸ್ ಸಾಲ್ಮರ ಇವರ ಸಂಯುಕ್ತ ಆಶ್ರಯದಲ್ಲಿ ಉಪ್ಪೂರು ಗ್ರಾಮದಲ್ಲಿ ನಡೆದ "ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ" ವನ್ನು ಬ್ರಹ್ಮಾವರ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಯಾದ ಡಾ. ಉದಯ್ ಕುಮಾರ್ ಶೆಟ್ಟಿ ಉದ್ಘಾಟಿಸಿ ರೇಬಿಸ್ ಖಾಯಿಲೆಯ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪ್ಪೂರು ಗ್ರಾಮ ಪಂಚಾಯತ್ ಲೆಕ್ಕ ಸಹಾಯಕರಾದ ಉದಯ್ , ಸಿಬ್ಬಂದಿ ವರ್ಗದವರು, ಯುವ ವಿಚಾರ ವೇದಿಕೆ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಯುವಜನ ಮಂಡಲದ ಅಧ್ಯಕ್ಷರಾದ ಜಯಕರ್ ಉಪ್ಪೂರು, ಜನತಾ ವ್ಯಾಯಮ ಶಾಲೆ ಅಧ್ಯಕ್ಷರಾದ ಅರುಣ್ ಕರ್ಕೇರ, ಗೆಳೆಯರ ಬಳಗದ ಸುಕೇಶ್, ಸವಿನಯ ಪ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಸುಕೇಶ್, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಭಾಸ್ಕರ್ ಡಿ. ಶೆಟ್ಟಿ ಅಮ್ಮುಂಜೆ, ವಿಶ್ವಾಸ್ ಪ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಪ್ರಭಾಕರ್ ಆಚಾರ್ಯ, ಕೊಳಲಗಿರಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರಾದ ಉದಯ್ ಗಾಣಿಗ, ಕಿರಿಯ ಪಶು ಪರಿವೀಕ್ಷಕರಾದ ಅಭಿಷೇಕ್ , ಪಶು ವೈದ್ಯಕೀಯ ಪರಿವೀಕ್ಷಕರಾದ ಜೇನುಕಲ್ ಸಿದ್ದೇಶ್ , ಪಶು ಸಖಿಯಾರಾದ ಮಂಜುಳಾ, ನಳಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮದ 9 ಕೇಂದ್ರಗಳಲ್ಲಿ ವಿವಿಧ ಸಮಯದಲ್ಲಿ ಬೆಳಿಗ್ಗೆ 9 ರಿಂದ 12.30 ರ ವರೆಗೆ ಸಂಯೋಜಿತ ಸಂಘಟನೆಯ ಸಹಕಾರದ ಮೂಲಕ ಸುಮಾರು 300 ಸಾಕುನಾಯಿಗಳಿಗೆ ಉಚಿತವಾಗಿ ರೇಬಿಸ್ ರೋಗ ನಿರೋಧಕ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಯಿತು. ಪ್ರತಿ ವರ್ಷ ಆಯೋಜಿಸುತ್ತಿರುವ ನಮ್ಮ ಈ ಶಿಬಿರಕ್ಕೆ ಸಂಘಟಿತ ಬೆಂಬಲ ಯಶಸ್ಸಿಗೆ ಕಾರಣ ಎನ್ನುತ್ತಾ ಸಹಕರಿಸಿದ ಸರ್ವರಿಗೂ ಕೃತಜ್ಞತೆ ತಿಳಿಸಲಾಯಿತು. ಸರ್ವರಿಗೂ ದಿನೇಶ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದ ಸುಬ್ರಹ್ಮಣ್ಯ ಆಚಾರ್ಯ ವಂದಿಸಿದರು. ಕಾರ್ಯಕ್ರಮವನ್ನು ಯುವ ವಿಚಾರ ವೇದಿಕೆಯ ಯೋಗೀಶ್ ಕೊಳಲಗಿರಿ ನಿರೂಪಿಸಿದರು.