Header Ads Widget

ಯುಪಿಎಂಸಿ: ಕಂಪ್ಯೂಟರ್ ತರಬೇತಿಗೆ ಚಾಲನೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ  ನವೀಕೃತ ಕಂಪ್ಯೂಟರ್ ಲ್ಯಾಬ್ ನಲ್ಲಿ ಬಿಬಿಎ ಮತ್ತು ಬಿ.ಕಾಮ್ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿಗೆ ಚಾಲನೆ ನೀಡಲಾಯಿತು.

ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಶ್ರೀ ಭಾರತೀ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮತ್ತು ನೇಚರ್ ಬೌಂಡ್ ಸಹ್ಯಾದ್ರಿ ಅಂಕೋಲಾ ಇದರ ನಿರ್ದೇಶಕರಾದ ಶ್ರೀ ಗಿರೀಶ್ ಎಂ ದೀಪ ಬೆಳಗಿಸಿ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಅತ್ಯವಶ್ಯ ಪ್ರಸ್ತುತ ಕಾಲಘಟ್ಟದಲ್ಲಿ ಪದವಿ ಶಿಕ್ಷಣದಲ್ಲಿ ಅಕ್ಷರಸ್ಥ ಆದರೆ ಮಾತ್ರ ಸಾಧ್ಯವಿಲ್ಲ ಕಂಪ್ಯೂಟರ್ ನಲ್ಲೂ ಸಾಕ್ಷರತೆ ಅತೀಮುಖ್ಯ ವಾಣಿಜ್ಯ ಕ್ಷೇತ್ರದಲ್ಲಿ ಇದು ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ  ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್  ನೀಡಿದ ಡಾ. ಟಿ ಎಂ ಎ ಪೈ ಪ್ರತಿಷ್ಠಾನ ಮಣಿಪಾಲ ಇದರ ಅಧ್ಯಕ್ಷರಾದ ಶ್ರೀ ಟಿ ಅಶೋಕ್ ಪೈ ಹಾಗು ಟ್ರಸ್ಟಿ ಯವರಾದ ಶ್ರೀ ಸಚಿನ್ ಪೈ ಅವರಿಗೆ ಧನ್ಯವಾದ ಅರ್ಪಿಸಿದರು.

ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಹಾಗೂ ಕಂಪ್ಯೂಟರ್ ಲ್ಯಾಬ್ ಸಂಯೋಜಕರಾದ ಶ್ರೀಮತಿ ಸಿಬಿ ಪೌಲ್ ಉಪಸ್ಥಿತರಿದ್ದರು.


ವಾಣಿಜ್ಯ ಉಪನ್ಯಾಸಕರುಗಳಾದ ಶ್ರೀ ಹರಿಕೇಶವ್ ಸ್ವಾಗತಿಸಿದರು, ಕು.ಇಂದಿರಾ ವಂದಿಸಿದರು, ರಾಘವೇಂದ್ರ ಜಿ ಜಿ ಕಾರ್ಯಕ್ರಮ ನಿರೂಪಿಸಿದರು.