ಅಕ್ಟೋಬರ್ ನಲ್ಲಿ ಧೂಮಕೇತುಗಳ ಮೆರವ ಣಿಗೆ. ಧೂಮಕೇತು ಸುಚಿನ್ಸಾನ್ ಅಟ್ಲಾಸ್ ಮತ್ತು ಸನ್ಗ್ರೇಸರ್ ಅಟ್ಲಾಸ್.
ಈಗ ಸಪ್ಟಂಬರ್ ಅಕ್ಟೋಬರ್ ಗೊಂದು ಸುಚಿನ್ ಸಾನ್ ಅಟ್ಲಾಸ್ ಧೂಮಕೇತು ಬರಲಿದೆ. ನಂತರ ಅಕ್ಟೋಬರ್ ನವಂಬರ್ ಗೆ ಮತ್ತೊಂದು.
ಮೊದಲನೇಯ ಧೂಮಕೇತು 2023 ರ ಜನವರಿಯಲ್ಲಿ ದೂರದರ್ಶಕದಲ್ಲಿ ಸುಮಾರು 100 ಕೋಟಿ ಕಿಮೀ ದೂರದಲ್ಲಿ ಮೊದಲು ನೋಡಿ “ ಶತಮಾನದ ಧೂಮಕೇತು “ಎಂದು ಇದನ್ನು ಬಣ್ಣಿಸಲಾಗಿತ್ತು .ಆದರೆ ಈಗ ಇದನ್ನು “ ವರ್ಷದ ಧೂಮಕೇತು “ಎಂದು ಅಂದಾಜಿಸ ಲಾಗಿದೆ.
ಈ ಧೂಮಕೇತುವಿನ ಹೆಸರು “ಸುಚಿನ್ಸನ್ - ಅಟ್ಲಾಸ್". (comet C/2023 A3 Tsuchinshan ATLAS ). ಈ ಸಪ್ಟಂಬರ್ ಕೊನೆಯ ವಾರದಲ್ಲಿ ಹಾಗೂ ಈಗಕೆಲದಿನ ಸೂರ್ಯೋದಯಕ್ಕೆ ಮುನ್ನ ಬರಿಕಣ್ಣಿಗೆ ಕಾಣಿಸಿದೆ.
ಸೌರ ವ್ಯೂಹದ ಹೊರವಲಯ ಊರ್ಸ್ ಕ್ಲೌಡ್ ನಿಂದ ( ಸುಮಾರು 3ಜ್ಯೋತಿರ್ವರ್ಷ =. 30 ಟ್ರಿಲಿಯನ್ ಕಿಮೀ ) ದೂರದಿಂದ ಹೊರಟ ಈ ಧೂಮಕೇತು , ಸೆಕೆಂಡಿಗೆ ಸುಮಾರು 80 ಕಿಮೀ , ಅತ್ಯಂತ ವೇಗದಲ್ಲಿ ಕ್ರಮಿಸುತ್ತಾ ಈಗ ಸಪ್ಟಂಬರ್ 27 ರಂದು ಸೂರ್ಯನನ್ನು ಸಮೀಪಿಸಿ ಹಿಂತಿರುಗುತ್ತಿದೆ.
ಸುಮಾರು 80 ಸಾವಿರ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಈ ಧೂಮಕೇತು ಸೂರ್ಯನಿಂದ ಹಿಂತಿರುಗುವಾಗ ಅಕ್ಟೋಬರ್ ಸಂಜೆಯ ಪಶ್ಚಿಮ ಆಕಾಶದಲ್ಲಿ 8ರಿಂದ ಬರಿಕಣ್ಣಿಗೆ ಕಾಣಿಸಿ, ಆಕ್ಟೋಬರ್ 12 ರಂದು ಭೂವಿಗೆ ಸಮೀಪಿಸಲಿದೆ.
2023ರ ಜನವರಿಯಲ್ಲಿ ಪ್ರಥಮ ದೂರದರ್ಶ ಕದಲ್ಲಿ ನೋಡಿ 2024 ಸಪ್ಟಂಬರ್ ಅಕ್ಟೋಬರ್ ಗೆ ಇದೊಂದು ಶತಮಾನದ ಧೂಮಕೇತು ವಾಗಲಿದೆ ಎಂದು ಅಂದಾಜಿಸಿದ್ದರಾದರೂ ಈ ಪೆಭ್ರವರಿ 2024 ರ ಹೊತ್ತಿಗೆ ಇದು ಕಾಣೆ ಯಾದಾಗ “ ಇದು ಸಿಡಿದು ಹೋಯಿತು “ ಎನ್ನಲಾಯ್ತು. ಈಗ ಇದರ ತುಂಡೋ ಅಥವಾ ಮೂಲ ಧೂಮಕೇತುವೂ ಅಂತೂ ದೂರ ದರ್ಶಕಕ್ಕೆ ಪುನಃ ಗೋಚರಿಸಿದಾದ “ಬರಿಗಣ್ಣಿಗೆ ಕಾಣುವ ವರ್ಷದ ಧೂಮಕೇತುವಾಗಲಿದೆ “ಎಂದು ಅಂದಾಜಿಸಲಾಗಿದೆ. ಎರಡನೇಯದು ಮೊನ್ನೆ ಸಪ್ಟಂಬರ್ 27 ರಂದು ಮೊದಲು ನೋಡಿ ಇದೊಂದು ಸನ್ಗ್ರೇಸರ್ ಧೂಮಕೇತು ಎಂದಿದ್ದಾರೆ. ಇದು ಅಕ್ಟೋಬರ್ 28ರಂದು ಸೂರ್ಯನ ಸಮೀಪ ಬರಲಿದೆ. ಇದೊಂದು ಸುಂದರ ಶತಮಾನದ ಧೂಮಕೇತುವಾಗ ಬಹುದೆಂದು ಅಂದಾಜಿಸಿದ್ದಾರೆ., ಹಾಗೆ ಈ ರೀತಿಯ ಧೂಮಕೇತುಗಳು ಸೂರ್ಯನ ಅತೀ ಸಮೀಪ ಬರುವುದರಿಂದ ಆಗಲೇ ಸಿಡಿದು ಪುಡಿ ಪುಡಿಯಾಗಲೂ ಬಹುದು. ಉಳಿದು ಹಿಂತಿರುಗಿದರೆ ಬಲು ಚೆಂದ.
ಧೂಮಕೇತುಗಳೇ ಹೀಗೆ, ಅಲೆಮಾರಿಗಳು. ಇವುಗಳ ಚಲನವಲನ ಹೀಗೆಯೇ ಎನ್ನು ವಂತಿಲ್ಲ.
ಇವುಗಳು ಶತಮಾನದ ಧೂಮಕೇತಗಳಾಗ ಬಹುದೇ? ಬರಿಗಣ್ಣಿಗೆ ಕಾಣಿಸಿಕೊಂಡು ವರ್ಷದ ಧೂಮಕೇತುವೇ? ಈ ಎಲ್ಲಾ ಪ್ರಶ್ನೆಗಳಿಗೆ ಕೆಲ ದಿನಗಳಲ್ಲಿ ಉತ್ತರ ಸಿಗಲಿದೆ. ಶತಮಾನದ ಧೂಮಕೇತು Comet of the century ಅಂದರೆ ಅದು ಕೆಲ ತಿಂಗಳು ಆಕಾಶದಲ್ಲಿ ಬರೆಕಣ್ಣಿಗೆ ಕಂಡು ವಿಜೃಂಭಿಸುವ ಧೂಮಕೇತು. ವರ್ಷದ ಧೂಮಕೇತುವೆಂದರೆ, ಬರೆ ಕಣ್ಣಿಗೆ ಕಾಣ ಸಿಗುವ ಧೂಮಕೇತು.
ಈ ಹಿಂದೆ ಬಂದು ಬರಿಗಣ್ಣಿಗೆ ಕಂಡ ಧೂಮಕೇತುಗಳನ್ನು (Great Comet) ಗ್ರೇಟ್ ಕಾಮೆಟ್ ಎಂದು ಹೆಸರಿಸಿದ್ದಾರೆ. 1996 ರ ಹಯಾಕುಟಿಕೆ, 1997ರ ಹೇಲ್ ಬೂಪ್, 2003ರ ನೀಟ್, 2007ರ ಮಕ್ನಾಟ್, 2011ರ ಲವ್ಜಾಯ್, ಹಾಗೂ 2020ರ ನಿಯೋವೈಸ್ಗಳು. ಈಗ ಬರುತ್ತಿರುವ ಧೂಮಕೇತುಗಳು ಬರಿಗಣ್ಣಿಗೆ ಕಂಡು , ಇವುಗಳ ಸಾಲಿಗೆ ಸೇರ ಲಿದೆಯೇ ಕಾದು ನೋಡಬೇಕಿದೆ. ಈ ಧೂಮ ಕೇತುಗಳು ಸೂರ್ಯ ಸಮೀಪ ಬರುವಾಗ ಬೆಳಗಿನ ಜಾವ ಹಾಗೂ ಹಿಂತಿರುಗುವಾಗ ಸಂಜೆ ಆಕಾಶದಲ್ಲಿ ಕಾಣಿಸುತ್ತವೆ., ಸೂರ್ಯನ ಸಮೀಪ ಬಂದು ಹೋಗುವಾಗ ಬೃಹತ್ ಬಾಲ ಬೀಸಿ ವಿಸ್ಮಯ ತೋರಬಹುದು. ಬಾಲ ಗಳಲ್ಲೂ ಎರಡು. ನೀಲಿ ಬಣ್ಣದ ಸೂರ್ಯನಿಗೆ ನೇರ ವಿರುಧ್ದ ದಿಕ್ಕಿನಲ್ಲಿದ್ದರೆ, ಮತ್ತೊಂದು ಬಾಲ ಆವಿಯ ಕಣಗಳ ವಕ್ರ ಬಾಲ.
ರಾತ್ರಿ ಆಕಾಶದಲ್ಲಿ ಚಂದ್ರನೇ ಚೆಂದ. ಚಂದ್ರನನ್ನು ಬಿಟ್ಟರೆ ಧೂಮಕೇತುಗಳೇ ಚೆಂದ. ಪ್ರಕೃತಿಯ ವಿಸ್ಮಯಗಳನ್ನು ನೋಡಿಯೇ ಆನಂದಿಸಬೇಕು ಅಷ್ಟೆ.
~ಡಾ ಎ ಪಿ ಭಟ್, ಉಡುಪಿ.