Header Ads Widget

ಎಬಿವಿಪಿ ಯಿಂದ ಪ್ರತಿಭಟನೆ

 

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ಜಿಲ್ಲೆ ವತಿಯಿಂದ ಇ.ಸಿ.ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ವಿರುದ್ಧ ಮಂಗಳವಾರ ದಿನಾಂಕ 22-10-2024 ರಂದು ಅನ್ಯಾಯ ವಾಗಿ ತಡೆಹಿಡಿದ ವಿದ್ಯಾರ್ಥಿಗಳ ಎಸ್ಎಲ್ ಸಿ ಮತ್ತು ಪಿಯುಸಿ ಅಂಕಪಟ್ಟಿಯನ್ನು ಹಿಂದಿ ರುಗಿಸುವಂತೆ ಆಗ್ರಹಿಸಿ  ಪ್ರತಿಭಟಿಸಿ ಯಶಸ್ವಿಯಾಗಿ ಅಂಕಪಟ್ಟಿ ಯನ್ನು ಹಿಂಪಡೆ ಯಲಾಯಿತು.


ಕಳೆದ ಕೆಲವು ವರ್ಷಗಳಿಂದ ಅನಧಿಕೃತವಾಗಿ ಅನೇಕ ವಿದ್ಯಾರ್ಥಿಗಳ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಅಂಕಪಟ್ಟಿಯನ್ನು  ತಡೆಹಿಡಿದು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ವಾಡುತ್ತಿದ್ದ  ಅಚಲಾಡಿಯಲ್ಲಿರುವ ಇ.ಸಿ.ಆರ್ ಕಾಲೇಜಿನ ಗೇಟಿನ ಎದುರು ಶೋಷಿತ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪ್ರಾಂಶುಪಾಲರು ಬಂದು ಸಮಸ್ಯೆಗಳನ್ನು ಆಲಿಸುವಂತೆ ಪಟ್ಟು ಹಿಡಿದರು. ನಂತರ ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಗಣೇಶ್ ಪೂಜಾರಿ ಅವರು ಯುಜಿಸಿ ನಿಯಮ ಬಾಹಿರವಾಗಿ ಅನಧಿಕೃತ ವಾಗಿ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ತಡೆಹಿಡಿದಿರುವುದನ್ನು ಈ ಕೂಡಲೇ ಹಿಂದಿ ರುಗಿಸುವಂತೆ ಮನವರಿಕೆ ಮಾಡಿ ಅಲ್ಲಿ ಸೇರಿದ್ದ 10 ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಕಾಲೇಜಿ ನಿಂದ ಯಶಸ್ವಿಯಾಗಿ ಹಿಂಪಡೆಯಲಾಯಿತು. 


ನಂತರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಸಂಚಾಲಕ ಕಾರ್ತಿಕ್ ಎಂ ಈ ಕಾಲೇಜಿನಿಂದ ನೂರಾರು ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಮುಂದೆ ಬರುವಂತಹ ದಿನಗಳಲ್ಲಿ ಎಲ್ಲರ ಸಮಸ್ಯೆಗಳನ್ನು ಪರಿಹರಿ ಸುವಲ್ಲಿ ಎಬಿವಿಪಿ ನೇತೃತ್ವ ವಹಿಸುತ್ತದೆ ಎಂದು ತಿಳಿಸಿದರು.


ಪ್ರತಿಭಟನೆ ಸಂದರ್ಭ ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ ಸಂಚಾಲಕ ಶ್ರೀವತ್ಸ, ಉಡುಪಿ ತಾಲೂಕು ಸಂಚಾಲಕ ಶ್ರೇಯಸ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಂಹಿತಾ ಮತ್ತು ಪ್ರಮುಖರಾದ ಸ್ವಸ್ತಿಕ್ ಕಿಶೋರ್,ಶಶಾಂಕ್, ನವೀನ್ ಉಪಸ್ಥಿತ ರಿದ್ದರು ವಿದ್ಯಾರ್ಥಿಯಾದ ರೋಶನ್ ತನಗಾದ ಸಮಸ್ಯೆಯನ್ನು ವಿವರಿಸಿದರು ಹಾಗೂ ಕೋಟ ಠಾಣಾ ಉಪನಿರೀಕ್ಷಕರದ ರಾಘವೇಂದ್ರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತ ರಿದ್ದರು.