Header Ads Widget

ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ- ಶರನ್ನವರಾತ್ರಿ 18ರ ಸಂಭ್ರಮ

ಉಡುಪಿ ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿಸಿ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ 18ನೇ ವರ್ಷದ ಶರನ್ನವರಾತ್ರಿ ಮಹೋತ್ಸವವನ್ನು ಬಹು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಶ್ರೀ ಕ್ಷೇತ್ರವನ್ನು ಶೂನ್ಯದಿಂದ ಅನಂತದೆಡೆಗೆ ಕೊಂಡೊಯ್ಯುತ್ತಿರುವ ಶ್ರೀ ಗುರೂಜಿಯವರು ಆತ್ಮಸ್ಥೈರ್ಯದ ಪ್ರತೀಕ ಕ್ಷೇತ್ರದ ನಡೆದಾಡುವ ದೇವರಾದ ಶ್ರೀ ಗುರೂಜಿಯವರನ್ನು ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಶ್ರೀ ರಮಾನಂದ ಗುರೂಜಿ ಶಿಷ್ಯ ಬಳಗ ಆಯೋಜಿಸಿದ ವಿಶೇಷ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ರಾತ್ರಿಯ ರಂಗ ಪೂಜಾ ಸಹಿತ ಕಲ್ಪೋಕ್ತ ಪೂಜೆಯ ನಂತರ ಶ್ರೀ ಕ್ಷೇತ್ರದಿಂದ ಗುರೂಜಿಯವರನ್ನು ಚೆಂಡೆ ನಾದ ಮಂಗಳವಾದ್ಯ ನೃತ್ಯಸಹಿತವಾಗಿ ವೇದಘೋಷಗಳೊಂದಿಗೆ ನವಶಕ್ತಿ ವೇದಿಕೆಯಲ್ಲಿ ಬರಮಾಡಿಕೊಳ್ಳಲಾಯಿತು.. ಶ್ರೀ ಗುರೂಜಿಯವರಿಗಾಗಿ ಭಕ್ತ ಸಮೂಹ ವಿಶೇಷವಾಗಿ ರಚಿಸಿದ್ದ ಹೂವಿನ ಮಂಟಪದಲ್ಲಿ ಕುಳ್ಳಿರಿಸಿ ಪಾದಪೂಜೆ ನೆರವೇರಿಸಲಾಯಿತು.

 ಮುತ್ತಿನ ಪೇಟವನ್ನು ತೊಡಿಸಿ, ಬೃಹತ್ ಗುಲಾಬಿಯ ಹಾರ ವನ್ನು ಅಲಂಕರಿಸಿ, ರೇಷ್ಮೆಯಾ ವಸ್ತ್ರವನ್ನು ಉಡುಗೊರೆಯನ್ನಾಗಿಸಿ, ಚಿನ್ನದ ಉಂಗುರವನ್ನು ತೊಡಿಸಿ, ತಮಗೆ ಉತ್ತಮ ಜೀವನವನ್ನು ಕರುಣಿಸಿದ ಗುರೂಜಿಯವರಿಗೆ ಧನ್ಯವಾದ ಸಮರ್ಪಿಸಿದರು.

ಯೋಗ ಗುರು ಸ್ವಸ್ತಿಕ್ ಆಚಾರ್ಯ ಅವರು ಸಂಖ್ಯೆ 18ರ ಮಹತ್ವವನ್ನು ವಿವರಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರೂಜಿ ಅವರು ದೇವರನ್ನು ಪ್ರೀತಿಸಿ, ಮೋಹಿಸಿ, ದೇವರು ನಮ್ಮನ್ನು ಪ್ರೀತಿಸುತ್ತಾರೆ. ದೃಢ ಚಿತ್ತ ಸಂಕಲ್ಪವನ್ನು ಹೊಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಯಶಸ್ಸು ಸಾಧ್ಯ ಎಂದರು. ನಾನೊಬ್ಬ ಸಾಮಾನ್ಯ ಮನುಷ್ಯ ಇದು ನನಗೆ ಸಂದ ಗೌರವವಲ್ಲ ಈ ಕ್ಷೇತ್ರದ ಮಾತೆಗೆ ಸಂದ ಗೌರವ ಎಲ್ಲವೂ ತಾಯಿಯ ಪ್ರೇರಣೆಯಂತೆ ನೆರವೇರುತ್ತಿದೆ ಆಕೆ ನಡೆಸಿದಂತೆ ನಾನು ನಡೆಯುತ್ತೆನೆ ಎಂದು ಭಾವನಾತ್ಮಕವಾಗಿ ನುಡಿದರು.

ಈ ಶುಭ ಸಂದರ್ಭದಲ್ಲಿ 18ನೇ ವರ್ಷದ ಶರನ್ನವರಾತ್ರಿಯ ಸವಿ ನೆನಪಿಗಾಗಿ ಅತಿರಸ ಮಹಾಪ್ರಸಾದವನ್ನು ಲೋಕಾರ್ಪಣೆಗೊಳಿಸಿದರು.. ನಿತ್ಯವೂ ಭಕ್ತರಿಗೆ ಲಭ್ಯವಿರುವಂತೆ ಸಿಹಿ ಭಕ್ಷಗಳಲ್ಲಿ ಅತಿ ಶ್ರೇಷ್ಠವೆನಿಸಿದ ಶ್ರೀ ಚಕ್ರಪೀಠ ಸುರಪೂಜಿತೆಗೆ ಅತಿಪ್ರಿಯವೆನಿಸಿದ ಅತಿರಸ ಕ್ಷೇತ್ರದ ಪ್ರಧಾನ ಪ್ರಸಾದವಾಗಿ ಇನ್ನು ಮುಂದೆ ಭಕ್ತರಿಗೆ ಲಭ್ಯವಿರುತ್ತದೆ ಇದು ಐತಿಹಾಸಿಕವೆನಿಸಲಿದೆ ಎಂದರು.

ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಕ್ಷೇತ್ರ ರಚನೆಯ 18 ವರ್ಷಗಳ ಪರಿಶ್ರಮ ನೋವು ನಲಿವುಗಳ ಚಿತ್ರಣವನ್ನು ಪ್ರಾಸ್ತಾವಿಸಿದರು.

ಕ್ಷೇತ್ರದ ಅರ್ಚಕ ವರ್ಗ ಪುರೋಹಿತ ವರ್ಗ, ಪರಿಚಾರಿಕ ವರ್ಗ, ಪಾಕಶಾಸ್ತ್ರಜ್ಞರು,ಹಾಗೂ ಪ್ರಜ್ಞ ಶಾಲೆಯ ಶಿಕ್ಷಕ ಶಿಕ್ಷಕಿಯರು, ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪೋಷಕರು ಹಾಗೂ ಕ್ಷೇತ್ರದ ಭಕ್ತರುಗಳು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.