Header Ads Widget

ಡಿ.9-15: ಶತಚಂಡಿಕಾ ಯಾಗ, ಬ್ರಹ್ಮಮಂಡಲ ಉಡುಪಿ

 

ಇತಿಹಾಸ ಪ್ರಸಿದ್ಧ ಇಲ್ಲಿನ ಬೈಲೂರು ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ವಾಗಿ ಡಿ.9ರಿಂದ 15ರ ವರೆಗೆ ಶತಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆ ನಡೆಯ ಲಿದೆ ಎಂದು ಮಹೋತ್ಸವ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ಶನಿವಾರ ದೇವಳದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷ್ಣ ಮಠ ಪರಿಸರದ ನಾಲ್ಕು ಶಕ್ತಿ ಕೇಂದ್ರಗಳಲ್ಲಿ ಬೈಲೂರು ದೇವಳ ವೂ ಒಂದಾಗಿದ್ದು, ಮೊದಲು ಹುಲ್ಲಿನ ಮಾಡಿನ ಗುಡಿಯಲ್ಲಿದ್ದ ದೇವಳ ಪ್ರಸ್ತುತ ಶಿಲಾಮಯ ಆಲಯವಾಗಿದೆ. 2005ರಲ್ಲಿ ಊರ-ಪರವೂರ ಭಕ್ತಾದಿಗಳ ಸಹಕಾರದಿಂದ ಶ್ರೀ ದೇವಳದ ಜೀರ್ಣೋದ್ಧಾರ ಹಾಗೂ ಸುತ್ತುಪೌಳಿಯ ನವೀಕರಣ ಸಂದರ್ಭದಲ್ಲಿ ನಾಗದೇವರ ನುಡಿ ಹಾಗೂ ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿತ ವಾದಂತೆ ದೇವಿ ಪ್ರೀತ್ಯರ್ಥವಾಗಿ ಶತಚಂಡಿಕಾ ಯಾಗ ಹಾಗೂ ನಾಗ ಬ್ರಹ್ಮ ನಂದಿ ರಕ್ತೇಶ್ವರಿ ಮತ್ತು ಕ್ಷೇತ್ರಪಾಲ ಪ್ರೀತ್ಯರ್ಥವಾಗಿ ಬ್ರಹ್ಮ ಮಂಡಲ ಸೇವೆ ನಡೆಸಲಾಗುತ್ತದೆ. ಸುಮಾರು 50 ಲಕ್ಷ ರೂ. ವೆಚ್ಚವಾಗಲಿದೆ. 

ಸುಮಾರು 25 ಸಾವಿರ ಮಂದಿಗೆ ಅನ್ನಸಂತ ರ್ಪಣೆ ನಡೆಯಲಿದೆ ಎಂದು ಮಟ್ಟಾರು ವಿವರಿ ಸಿದರು.

ಕ್ಷೇತ್ರದ ತಂತ್ರಿ ಕೃಷ್ಣಮೂರ್ತಿ ತಂತ್ರಿ ಮಾತನಾಡಿ ಏಕಕುಂಡದಲ್ಲಿ ಪ್ರತಿದಿನ 10 ಮಂದಿ ದಶಾವರ್ತಿ ಆಹುತಿ ನೀಡಲಿದ್ದು, ಯಾಗ ಪೂರ್ವಾಂಗವಾಗಿ ಶುದ್ಧಿಹೋಮಗಳು, ರಾಕ್ಷೋ ಘ್ನಹೋಮ, ಗಣಹೋಮ ಇತ್ಯಾದಿ ಹೋಮ ಗಳು, ಸಪ್ತಶತೀ ಪಾರಾಯಣ, ಆಶ್ಲೇಷಾಬಲಿ ನಡೆಯಲಿದೆ. 

140 ಕೆಜಿ ಅಕ್ಕಿಯ ಪರಮಾನ್ನ ಆಹುತಿಗೆ ಬಳಸಲಾಗುವುದು. 100 ಮಂದಿ ಸುವಾಸಿನಿ ಯರು ಮತ್ತು 100 ಮಂದಿ ಕುಮಾರಿಕಾ ಪೂಜನ, ಡಿ.14ರಂದು ಸಹಸ್ರ ಮಹಿಳೆ ಯರಿಂದ ದುರ್ಗಾರತಿ ನಡೆಯಲಿದೆ ಎಂದರು.

ದೇವಳದ ಆಡಳಿತ ಸಮಿತಿ ಅಧ್ಯಕ್ಷ ಮೋಹನ ಮುದ್ದಣ್ಣ ಶೆಟ್ಟಿ, ಮಹೋತ್ಸವ ಸಮಿತಿ ಪದಾಧಿಕಾರಿಗಳಾದ ರಮೇಶ ಶೆಟ್ಟಿ ಕಳತ್ತೂರು, ಸುದರ್ಶನ ಸೇರಿಗಾರ್,  ಕಾರ್ಯದರ್ಶಿ ನಾರಾಯಣದಾಸ ಉಡುಪ ಮೊದಲಾದವ ರಿದ್ದರು.