Header Ads Widget

ಬೇಬಿ ಎಸ್‌. ಮೆಂಡನ್ ನಿಧನ

ಕೊಡವೂರು : ಅ.26: ಉಡುಪಿ ತಾಲೂಕು ಪಂಚಾಯತ್ ಮಾಜಿ ಸದಸ್ಯೆ, ಕಾಂಗ್ರೆಸ್‌ ನಾಯಕಿ ಕೊಡವೂರಿನ ಬೇಬಿ ಎಸ್‌. ಮೆಂಡನ್ (76) ಅನಾರೋಗ್ಯದಿಂದ ಮಣಿಪಾಲದ ಆಸ್ಪತ್ರೆ ಯಲ್ಲಿ ಇಂದು ನಿಧನರಾದರು.


ಕೊಡವೂರು ಶಂಕನಾರಾಯಣ ದೇವಸ್ಥಾನದ ಟ್ರಸ್ಟಿ, ಕೈಪುಂಜಾಲ್ ಮೊಗವೀರ ಮಹಿಳಾ ಸಭಾದ ಅಧ್ಯಕ್ಷರಾಗಿಯೂ ಇವರು ಕಾರ್ಯ ನಿರ್ವ ಹಿಸಿದ್ದರು.


ಇವರು ಇಬ್ಬರು ಪುತ್ರರನ್ನು ಹಾಗೂ ಪುತ್ರಿ ಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ ಕುಮಾರ್ ಕೊಡವೂರು, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸಂತಾಪ ವ್ಯಕ್ತ ಪಡಿಸಿದ್ದಾರೆ.