Header Ads Widget

ಕಸ ಎಸೆಯುತ್ತಿದ್ದ ಜಾಗ ಇದೀಗ ಸೆಲ್ಪೀ ಪಾಯಿಂಟ್!

ಉಡುಪಿ : ಬೆಳ್ಳೆ ಗ್ರಾಮ ಪಂಚಾಯಿತಿಯ ನೆಲ್ಲಿಕಟ್ಟೆಯಲ್ಲಿ ಸಾಹಸ್ ಸಂಸ್ಥೆ ಮತ್ತು ಎಚ್‌ಸಿಎಲ್ ಫೌಂಡೇಶನ್ ಸಹಯೋಗದಲ್ಲಿ ಸಾರ್ವಜನಿಕರು ಕಸ ಎಸೆಯುತ್ತಿದ್ದ ಜಾಗವನ್ನು ಇದೀಗ ಸೆಲ್ಪಿ ಕಾರ್ನರ್ ಆಗಿ ಪರಿವರ್ತಿಸುವ ಮೂಲಕ ಎಲ್ಲೆಂದರಲ್ಲಿ ಕಸ ಎಸೆಯದಂತೆ ಜಾಗೃತಿ ಮೂಡಿಸಲಾಗಿದೆ.

ಈ ಸೆಲ್ಪೀ ಪಾಯಿಂಟ್‌ನ್ನು ಬೆಳ್ಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ವಿ. ಆಚಾರ್ಯ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಶಿಧರ್ ವಾಗ್ಳೆ, ಸದಸ್ಯರಾದ ರಾಜೇಂದ್ರ ಶೆಟ್ಟಿ, ಗುರುರಾಜ್ ಭಟ್, ರಂಜನಿ ಹೆಗ್ಡೆ, ಸಾಹಸ್ ಸಂಸ್ಥೆಯ ಮೇಲ್ವಿಚಾರಕಿ ವಿಶಾಲ, ಸ್ವಯಂ ಸೇವಕರಾದ ಶೋಧನ್, ಅವಿನಾಶ್, ಸಾತ್ವಿಕ್, ಗ್ರಾಮ ಪಂಚಾಯತಿ ದ್ವಿತೀಯ ದರ್ಜೆ ಲೆಕ್ಕಸಹಾಯಕ ಸದಾನಂದ ಪೂಜಾರಿ, ಎಸ್‌ಎಲ್‌ಆರ್‌ಎಂ ಮೇಲ್ವಿಚಾರಕಿ ಧನಲಕ್ಷ್ಮೀ ಮತ್ತು ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಇಲ್ಲಿ ಪ್ರವಾಸಿಗರಿಗೆ ಸೆಲ್ಪಿ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಸಾಹಸ್ ಸಂಸ್ಥೆಯ ವಿಶಾಲ ಮತ್ತು ಸ್ವಯಂ ಸೇವಕರನ್ನು ಗ್ರಾಮ ಪಂಚಾಯಿತಿ ಪರವಾಗಿ ಗೌರವಿಸಲಾಯಿತು.