Header Ads Widget

ದುರ್ಗಾ ಮೆನನ್ ಆರ್ ರವರಿಗೆ ಪಿ.ಎಚ್.ಡಿ

 

ವಿಶ್ವ ವಿದ್ಯಾನಿಲಯ, ಸಂಧ್ಯಾ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿರುವ ದುರ್ಗಾ ಮೆನನ್ ಆರ್. ಅವರು ಮಂಡಿಸಿರುವ ‘ಸ್ಥಿತ್ಯಂತರಗೊಳ್ಳುತ್ತಿರುವ ತುಳುನಾಡಿನ ವಾರ್ಷಿಕ ಆವರ್ತನದ ಆಚರಣೆಗಳು’ ಎಂಬ ಮಹಾಪ್ರಬಂಧಕ್ಕೆ ಮಾಹೆ (ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್) ವಿಶ್ವವಿದ್ಯಾನಿಲಯ ಪಿ.ಎಚ್.ಡಿ ನೀಡಿದೆ. ಡಾ.ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಉಡುಪಿ ಇಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿರುವ ಡಾ. ನಿಕೇತನ ರವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸಿದ್ದಾರೆ. ಇವರು ಶಕ್ತಿನಗರದ ದಿ| ರಮೇಶ್ ಹಾಗೂ ಅಮ್ಮಣಿ ದಂಪತಿ ಪುತ್ರಿ ಹಾಗೂ ಯೆಯ್ಯಾಡಿ ನಿವಾಸಿ ರವಿಕುಮಾರ್‌ರವರ ಪತ್ನಿ.