Header Ads Widget

ಕಿನ್ನಿಗೋಳಿ : ಕಾರಿನಲ್ಲಿ ಏಕಾಏಕಿ ಬೆಂಕಿ; ತಾಯಿ-ಮಕ್ಕಳ ರಕ್ಷಣೆ

ಕಾರಿನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡು ಉರಿದ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಪೇಟೆಯಲ್ಲಿ ಸಂಭವಿಸಿದೆ.

ಕಾರೊಂದಕ್ಕೆ ಆಕಸ್ಮತ್ ಬೆಂಕಿ ತಗುಲಿಗಿದ ಘಟನೆ ಕಿನ್ನಿಗೋಳಿ ಮುಖ್ಯ ರಸ್ತೆಯ ಮಾರುಕಟ್ಟೆ‌ಮುಂಭಾಗ ನಡೆದಿದೆ. ಮಕ್ಕಳು ಹಾಗೂ ತಾಯಿಯನ್ನು ಕಾರಿನಲ್ಲಿ ಕೂರಿಸಿ AC ಹಾಕಿ ಬೇಕರಿಗೆ ಹೋದ ಸಂಧರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ನಿವಾಸಿ ಜಾಸ್ಮಿನ್ ಅವರು ಮತ್ತೊರ್ವ ಮಹಿಳೆ‌ ಮತ್ತು ಎರಡು‌ ಮಕ್ಕಳೊಂದಿಗೆ ಕಿನ್ನಿಗೋಳಿ‌ ಮಾರುಕಟ್ಟೆ ಮುಂಭಾಗ ಕಾರು ನಿಲ್ಲಿಸಿ ಹೋದ ಸಂದರ್ಭ ಕಾರಿನಲ್ಲಿ ಹೊಗೆ ಬರಲಾರಂಭಿಸಿದೆ.

ಕಾರಿನಲ್ಲಿದ್ದ ಮಹಿಳೆ ಮತ್ತು ಎರಡು ಮಕ್ಕಳು ಬೊಬ್ಬೆ ಹಾಕಿದ್ದು ಕೂಡಲೇ ಸ್ಥಳೀಯರು ಸೇರಿ ಕಾರಿನಲ್ಲಿದ್ದವರನ್ನು ಅಪಾಯದಿಂದ ಪಾರು‌ಮಾಡಿದ್ದಾರೆ. ಸ್ಥಳಿಯ ಅಂಗಡಿ‌ಮಾಲಿಯ ರಾಘವೇಂದ್ರ ಪ್ರಭು ಸ್ಥಳೀಯ ಪ್ರೆಟ್ರೋಲ್ ಪಂಪ್ ನಿಂದ ಅಗ್ನಿ ಶಮನದ ಸಾಧನದ ಮೂಲಕ, ಸ್ಥಳಿಯರೊಂದಿಗೆ ಸೇರಿ ಬೆಂಕಿ ನಂದಿಸಿದ್ದಾರೆ. ಕಾರು ಸಂಪೂರ್ಣ ಸುಟ್ಟು ಹೋಗಿದ್ದರಿಂದ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.