Header Ads Widget

ಬೆಂಕಿ ಹಚ್ಚಿಕೊಂಡು ಓಡಿ ಬಂದ ಕಾರ್.. ಜನ ದಿಕ್ಕಾಪಾಲ್

ಜೈಪುರದ ಸೋಡಾಲಾ ಸಬ್ಜಿ ಮಂಡಿ ಪ್ರದೇಶದಲ್ಲಿ ಕಾರೊಂದು ಬೆಂಕಿ ಹೊತ್ತಿಕೊಂಡ ಬಳಿಕ ರಸ್ತೆಯಲ್ಲಿ ಚಲಿಸಿ ಆತಂಕಕ್ಕೆ ಕಾರಣವಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.


ಬೆಂಕಿ ಕಾಣಿಸಿಕೊಂಡ ಬಳಿಕ ಚಾಲಕ ಕಾರಿನಿಂದ ಹೊರಗಿಳಿದಿದ್ದು, ಚಾಲಕರಹಿತ ಕಾರು ಹಲವು ವಾಹನಗಳು ಸಂಚರಿಸುತ್ತಿದ್ದ ರಸ್ತೆಯಲ್ಲಿ ಚಲಿಸಿ ವ್ಯಾಪಕ ಭೀತಿಯನ್ನು ಉಂಟುಮಾಡಿದ ನಾಟಕೀಯ ಬೆಳವಣಿಗೆ ನಡೆಯಿತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಜ್ವಾಲೆ ಮತ್ತು ಹೊಗೆಯನ್ನು ಗಮನಿಸಿದ ಚಾಲಕ ಜಿಗಿದು ಪಾರಾಗಿದ್ದಾರೆ. ಆದಾಗ್ಯೂ ಕಾರು ರಸ್ತೆಯಲ್ಲಿ ವೇಗವಾಗಿ ಚಲಿಸಿತು.ಕೊನೆಗೂ ಡಿವೈಡರ್‌ಗೆ ಢಿಕ್ಕಿ ಹೊಡೆದು ನಿಂತಿತು. ಅದೃಷ್ಟವಶಾತ್, ವಾಹನ ಸುಟ್ಟು ಕಾರಕಲಾದದ್ದು ಹೋರತು ಪಡಿಸಿ ಯಾರೊಬ್ಬರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ರಸ್ತೆಯಲ್ಲಿದ್ದ ವಾಹನ ಸವಾರರು ಎದ್ದೋ ಬಿದ್ದೋ ಓಡಿದ ವಿಡಿಯೋಗಳು ವೈರಲ್ ಆಗುತ್ತಿವೆ.