ದಿನಾಂಕ 18/10/2024 ರಂದು ಹೇರಾಡಿಯಲ್ಲಿ "ಗೋಮಾತಸ್ಯ ಗೋವಿಗಾಗಿ ಮೇವು" ನೀಲಾವರ ಗೋಶಾಲೆಗೆ ಗೋಆಹಾರ ವಿತರಣ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಜಿತ್ ಜೋಗಿ ಯಡ್ತಾಡಿ ಇವರು, ಇಂತಹ ಪುಣ್ಯದ ಕಾರ್ಯಕ್ರಮದಲ್ಲಿ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಾಸಿ ಗೊಸಂರಕ್ಷಣೆ ಕಾರ್ಯದಲ್ಲಿ ತೊಡಗಬೇಕು ಎಂದು ಕೇಳಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏನ್ ಏಸ್ ಕೇಟರಿಂಗ್ ಮಾಲೀಕರಾದ ಹೃದಯ್ ಇವರು ವಹಿಸಿದ್ದರು ಹಾಗೆಯೇ ಕಾರ್ಯಕ್ರಮದಲ್ಲಿ ಮಾತಾ ಚಿಕೆನ್ಸ್ ಮಾಲೀಕರಾದ ನಿಖಿಲ್ ಕೆ ಎಂ ಹಾಗು ಭರತರಾಜ್, ಸೌರಭ್ ಶೆಟ್ಟಿ, ಕಿರಣ್ ಅಡಿಗ , ಚಂದ್ರಶೇಖರ ಮಡಿವಾಳ , ಮಹೇಶ್ ಕಾಂಚನ್, ಶ್ರೀಧರ್ , ಸುರೇಶ ಮಡಿವಾಳ, ಗುರುರಾಜ್, ಸಂದೇಶ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.